ಎಸ್ ಎಸ್ ಎಫ್ ಸ್ಥಾಪಕ ದಿನದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ

ಪಂಜರಕೋಡಿ,ಎ.29: ಎಸ್ ಎಸ್ ಎಫ್ ಮಿತ್ತರಾಜೆ ಶಾಖೆ ವತಿಯಿಂದ ಇಂದು ಪಂಜರಕೋಡಿ ರಿಫಾಯಿಯ್ಯ ಜುಮಾ ಮಸೀದಿ ವಠಾರದಲ್ಲಿ ಎಸ್ ಎಸ್ ಎಫ್ ಸ್ಥಾಪಕ ದಿನದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಪಂಜರಕೋಡಿ ಜುಮಾ ಮಸೀದಿ ಖತೀಬ್ ಬಹುl ಅಬೂಬಕರ್ ಮದನಿ(ಪಂಜರಕೋಡಿ ಉಸ್ತಾದ್) ಪ್ರಾರ್ಥನೆಯೊoದಿಗೆ ಚಾಲನೆ ನೀಡಿದರು. ಪ್ರಸುತ್ತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿತ್ತರಾಜೆ ಶಾಖಾಧ್ಯಕ್ಷ ಅಬ್ದುಲ್ ಹಮೀದ್ ಅಲಂಕರಿಸಿ ಧ್ವಜಾರೋಹಣವನ್ನು ನೆರವೇರಿಸಿದರು.
ದ್ವಜ ಸಂದೇಶ ಭಾಷಣ ಶಾಖೆಯ ಪ್ರಧಾನ ಕಾರ್ಯದರ್ಶಿ ಯಝೀದ್ ನೆರವೇರಿಸಿದರು ಮತ್ತು ಸ್ಥಳೀಯ ಮುಹಲ್ಲಿಂ ಶರೀಫ್ ಹನೀಫಿ ಉಸ್ತಾದ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
Next Story





