ಆಳ್ವಾಸ್ ಇಂಜಿನಿಯರಿಂಗ್ ತಂಡಕ್ಕೆ ಅವಳಿ ಪ್ರಶಸ್ತಿ
a-(1).gif)
ಮೂಡುಬಿದಿರೆ, ಎ.29 : ಮೂಡುಬಿದಿರೆಯ ಯೆನಪೋಯ ತಾಂತ್ರಿಕ ಕಾಲೇಜಿನ ಆಶ್ರಯದಲ್ಲಿ ಜರುಗಿದ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅಂತರ್ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟದ ಎರಡೂ ವಿಭಾಗಗಳಲ್ಲಿಯೂ ಮೂಡುಬಿದರೆಯ ಆಳ್ವಾಸ್ ಇಂಜಿನಿಯರಿಂಗ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪುರುಷರ ವಿಭಾಗದಲ್ಲಿ ಮನಿಲ್ ಶ್ರೇಷ್ಠ ಆಲ್‌ರೌಂಡರ್ ಹಾಗೂ ಮಹಿಳೆಯರ ವಿಭಾಗದಲ್ಲಿ ಅಂಕಿತ ಬೆಸ್ಟ್ ಆಲ್‌ರೌಂಡರ್ ಹಾಗೂ ಶೀತಲ್ ನಾಯಕ್ ಬೆಸ್ಟ್ ರೈಡರ್ ಆಗಿ ವೈಯಕ್ತಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
Next Story





