ಭ್ರಷ್ಟಾಚಾರದ ಜನಕ ಬಿಎಸ್‌ವೈ: ಸಿ.ಎಂ.ಇಬ್ರಾಹಿಂ

ಗದಗ, ಎ.29: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರದ ಜನಕ ಎಂದು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಸಿ.ಎಂ.ಇಬ್ರಾಹೀಂ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದವರೆ, ಇಂದು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷಕ್ಕೆ ಹಾಕಿರುವ ಬೀಜವೆ ಸರಿಯಿಲ್ಲ. ಇನ್ನು ಸಸಿ ಯಾವ ರೀತಿಯಲ್ಲಿ ಬರಲು ಸಾಧ್ಯ. ಬಿಜೆಪಿಯದ್ದು ತಾತ್ವಿಕ ಸಿದ್ಧಾಂತದ ಮೇಲೆ ಹಾಕಿರುವ ಬೀಜವಲ್ಲ. ಸಮಾಜದಲ್ಲಿ ಕೋಮುಭಾವನೆ ಕೆರಳಿಸುವಂತಹ ಸಿದ್ಧಾಂತದ ಮೇಲೆ ಹಾಕಿರುವ ಬೀಜ ಎಂದು ವಿಶ್ಲೇಷಿಸಿದರು.
Next Story





