ಝವಾಜ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎರಡನೇ ಕ್ಲೋತ್ ಬಾಕ್ಸ್ ಬಿಡುಗಡೆ

ಮಂಗಳೂರು,ಎ.29 : ಝವಾಜ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕ್ಲೋತ್ ಬ್ಯಾಂಕ್ ಅಭಿಯಾನದ ಅಂಗವಾಗಿ ಎರಡನೇ ಕ್ಲೋತ್ ಬಾಕ್ಸ್ ಕುದ್ರೋಳಿ ಜಾಮಿಯಾ ಮಸೀಯಲ್ಲಿ ಬಿಡುಗಡೆ ಮಾಡಲಾಯಿತು.
ಟ್ರಸ್ಟ್ ಅಧ್ಯಕ್ಷರಾದ ಇಸ್ಮಾಯಿಲ್ ಕಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಜಾಮಿಯಾ ಮಸೀದಿಯ ಖತೀಬ್ ಉಸ್ತಾದ್ ಮುಫ್ತಿ ಅಬ್ದುಲ್ ಮನ್ನಾನ್ ದುವಾ ನೆರವೇರಿಸಿದರು. ಯುವ ಮುಂದಾಳು ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಕ್ಲೋತ್ ಬಾಕ್ಸ್ ಬಿಡುಗಡೆ ಮಾಡಿ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಕುದ್ರೋಳಿ ಜಾಮಿಯ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಸ್.ಖಲೀಲ್, ಹಾಫಿರ್ ಅಮೀರ್ ಸಾಹೇಬ್, ಹಾಫಿರ್ ತೌಹೀದ್, ಟ್ರಸ್ಟ್ ಕಾರ್ಯದರ್ಶಿ ನೌಫಲ್ ಸಾಝ್ ಮದಕ, ಕೋಶಾಧಿಕಾರಿಯಾಗಿ ಅಫ್ತಾಬ್ ಮಂಗಳೂರು, ಸದಸ್ಯರಾದ ಇರ್ಫಾನ್ ಮೂಡಬಿದ್ರೆ, ಮುಹಿಯುದ್ದೀನ್ ಪುತ್ತೂರು, ಅಝ್ಮಲ್ ಕಾನ ಉಪಸ್ಥಿತರಿದ್ದರು.
ಟ್ರಸ್ಟ್ ಸಂಚಾಲಕ ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story





