ಎಸ್ ಎಸ್ ಎಫ್ ಪೇರಿಮಾರ್‌ನಲ್ಲಿ ಸ್ಥಾಪಕ ದಿನಾಚರಣೆ

ಪುದು,ಎ.29: ಎಸ್ ಎಸ್ ಎಫ್ ಪೇರಿಮಾರ್ ಶಾಖೆಯ ವತಿಯಿಂದ ಎಸ್ ಎಸ್ ಎಫ್ ಸ್ಥಾಪಕ ದಿನಾಚರಣೆಯ ಅಂಗವಾಗಿ ಪೇರಿಮಾರ್ ಮಸ್ಜಿದುಲ್ ಖಿಳ್‌ರ್ ಮುಂಭಾಗದಲ್ಲಿ ಧ್ವಜಾರೋಹಣ ನಡೆಯಿತು. ಪೇರಿಮಾರ್ ಖತೀಬ್ ರಫೀಕ್ ಸಅದಿ ಅಲ್-ಅಫ್ಳ್‌ಳಿ ದುಅ ನೇರವೇರಿಸಿದರು. ಪೇರಿಮಾರ್ ಜಮಾಅತ್ ಅಧ್ಯಕ್ಷ ಪಿ.ಎಂ. ಶಾಫಿ ಧ್ವಜಾರೋಹಣ ನೆರವೇರಿಸಿದರು. ದಾರುಲ್ ಉಲೂಂ ಮದರಸ ಪೇರಿಮಾರ್ ಸದರ್ ಮುಅಲ್ಲಿಂ ಬಿ. ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಸಂದೇಶ ಭಾಷಣ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಪೇರಿಮಾರ್ ಶಾಖ ಅಧ್ಯಕ್ಷ ಶಿಹಾಬುದ್ದೀನ್, ಪ್ರಧಾನ ಕಾರ್ಯದರ್ಶಿ ರಹೀಂ ಬಿ.ಆರ್., ಮುಅಲ್ಲಿಮರಾದ ಹಕೀಂ ಹನೀಫಿ, ಮುಸ್ತಫ ಅಮಾನಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫಳೂಲ್, ಜಮಾಅತ್ ಕೋಶಾಧಿಕಾರಿ ಹುಸೈನ್ ಬಿ. ಎಸ್.ವೈ.ಎಸ್ ಪೇರಿಮಾರ್ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್‌ಮಾನ್ ಮೇಸ್ತ್ರಿ, ಎಸ್ ಎಸ್ ಎಫ್ ಪೇರಿಮಾರ್ ಶಾಖೆಯ ಕಾರ್ಯದರ್ಶಿ ಉನೈಸ್. ಬಿ., ಅಮೀನ್ ಮಾಲಿಕ್, ಸದಸ್ಯರಾದ ದಾವೂದ್ ಮುಸ್ಲಿಯಾರ್, ನಬೀಲ್, ರಿಕಾರ್ ಮತ್ತಿತತರರು ಉಪಸ್ಥಿತರಿದ್ದರು.
ಎಸ್.ಎಸ್.ಎಫ್ ಪೇರಿಮಾರ್ ಶಾಖೆಯ ನಿಕಟಪೂರ್ವ ಕಾರ್ಯದರ್ಶಿ ಲತೀಫ್ ಮುಸ್ಲಿಯಾರ್ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.





