ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜು : ವಾರ್ಷಿಕ ಮಹಾ ಸಮ್ಮೇಳನ

ಮಂಗಳೂರು, ಎ. 29: ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನ 7ನೆ ವಾರ್ಷಿಕ ಮಹಾ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಲಾಯಿತು.
ತೋಡಾರು ಬದ್ರಿಯಾ ಸುನ್ನೀ ಜುಮಾ ಮಸೀದಿಯ ಅಧ್ಯಕ್ಷ ಎಂ.ಎ.ಎಸ್. ಅಬೂಬಕರ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಸೈಯದ್ ಅಲಿ ತಂಙಳ್ ಕುಂಬೋಳ್ ತಂಙಳ್ ದ್ಸಿಕ್ರ್ ಮಜ್ಲಿಸ್ ಆಧ್ಯಾತ್ಮಿಕ ಸಂಗಮಕ್ಕೆ ನೇತೃತ್ವ ನೀಡಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಂಸುಲ್ ಉಲಮಾ ಅರೆಬಿಕ್ ಕಾಲೇಜು ರಾಜ್ಯದ ಪ್ರತಿಷ್ಠಿತ ವಿದ್ಯಾ ಕೇಂದ್ರವಾಗಿ ಬೆಳೆದಿದ್ದು, ಈ ಸಂಸ್ಥೆಯನ್ನು ಇನ್ನಷ್ಟು ಉನ್ನತಿಗೇರಿಸಲು ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಅಂತಾರಾಷ್ಟ್ರೀಯ ವಾಗ್ಮಿ ವೌಲಾನ ನಿಝಾಮುದ್ದೀನ್ ಬಾಖವಿ ಮಾತನಾಡಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಎಂ.ಉಸ್ಮಾನುಲ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಯೂಸುಫ್ ಹಾಜಿ ಕೈಕಂಬ, ಅಬ್ದುರ್ರಹ್ಮಾನ್ ಕೈಕಂಬ, ಎಂ.ಎಸ್.ಮುಹಮ್ಮದ್ ಹಾಜಿ, ಸಲೀಂ ಹಂಡೇಲು, ಮುಹಮ್ಮದ್ ಹಾಸಿಂ, ಎಂ.ಎಚ್.ಶರೀಫ್, ಸಿ.ಎಚ್.ಗಫೂರ್, ಅಬ್ದುಲ್ ಅಝೀಝ್, ಎಂ.ಜಿ.ಶಾಹುಲ್, ಯು.ಟಿ.ಮುಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.
ವರ್ಕಿಂಗ್ ಸೆಕ್ರಟರಿ ಬಿ.ಎಂ.ಇಸ್ಹಾಕ್ ಹಾಜಿ ಸ್ವಾಗತಿಸಿದರು. ವಿದ್ಯಾರ್ಥಿ ಅಹ್ಮದ್ ನಈಮ್ ಕಾರ್ಯಕ್ರಮ ನಿರೂಪಿಸಿದರು.







