ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್ ವಲಯದಲ್ಲಿ ಸ್ಥಾಪಕ ದಿನಾಚರಣೆ
ಉಪ್ಪಿನಂಗಡಿ,ಎ 29: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಸೆಕ್ಟರ್ ಇದರ ವತಿಯಿಂದ ಎಸ್ಸೆಸ್ಸೆಫ್ಫ್ ಸ್ಥಾಪಕ ದಿನದ ಅಂಗವಾಗಿ ವಿವಿಧ ಶಾಖಾ ಮಟ್ಟದಲ್ಲಿ ಧ್ವಜಾರೋಹಣ ಮತ್ತು ಸಂಭ್ರಮಾಚರಣೆ ನಡೆಯಿತು.
ಕುಂತೂರು,ಕೆಮ್ಮಾರ,ಹಿರೆಬಂಡಾಡಿ,ಬಿಳಿಯೂರು ಶಾಖೆಗಳಲ್ಲಿ ಕ್ರಮವಾಗಿ,ಉನೈಸ್ ಕುಂತೂರು,ಹಬೀಬ್ ಕೆಮ್ಮಾರ,ಅಬ್ಬಾಸ್ ಮದನಿ ಬಂಡಾಡಿ,ಅಶ್ರಫ್ ಬಿಳಿಯೂರು ಧ್ವಜಾರೋಹಣವನ್ನು ನೆರವೇರಿಸಿದರು.ಸ್ಥಳೀಯ ನಾಗರಿಕರು,ಎಸ್.ಬಿ.ಎಸ್ ಪುಟಾಣಿಗಳು ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Next Story