ಒಡಿಸ್ಸಾ ರೈಲು ಯೋಜನೆಗೆ 3 ನಿಮಿಷದಲ್ಲೇ ಅನುಮತಿ ನೀಡಿದ ರೈಲ್ವೆಸಚಿವ ಸುರೇಶ್ ಪ್ರಭು
.jpg)
ಭುವನೇಶ್ವರ, ಎ.30: ಒಡಿಸ್ಸಾದಲ್ಲಿ ಹೊಸದಾಗಿನಿರ್ಮಿಸಲಾಗುವ ರೈಲುಮಾರ್ಗ ಯೋಜನೆಯ ಶಿಫಾರಸ್ಸಿಗೆ ಅಂಗೀಕಾರವನ್ನು ಕೇವಲ ಮೂರೇ ನಿಮಿಷದಲ್ಲಿ ನೀಡುವ ಮೂಲಕ ಕೇಂದ್ರ ರೈಲ್ವೆ ಸಚಿವ ಅದ್ಭುತ ಸೃಷ್ಟಿಸಿದ್ದಾರೆ.
ಪುರಿ-ಕೊನಾರ್ಕ ರೈಲುಮಾರ್ಗ ಕುರಿತು ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಟ್ವಿಟರ್‌ನಲ್ಲಿ ಪ್ರಸ್ತಾಪಿಸಿದ್ದರು.ಶುಕ್ರವಾರ ರಾತ್ರಿ 10.05ಕ್ಕೆ ಪ್ರವಾಸಕ್ಕೆ ಉತ್ತೇಜನ ನೀಡುವುದಕ್ಕಾಗಿ ರೈಲು ಮಾರ್ಗ ನಿರ್ಮಿಸುವ ಯೋಜನೆ ಕುರಿತು ನವೀನ್ ಪಟ್ನಾಯಕ್ ಟ್ವೀಟ್ ಮಾಡಿದ್ದರು. ಯೋಜನೆಯ ಅರ್ಧಖರ್ಚು ರಾಜ್ಯ ವಹಿಸಿಕೊಳ್ಳಲಿದೆ ಎಂದು ಟ್ವಿಟರ್‌ನಲ್ಲಿ ಮುಖ್ಯಮಂತ್ರಿ
ಶೀಘ್ರ ಕೆಲಸ ಆರಂಭಿಸುವುದಕ್ಕಾಗಿ ಕೂಡಲೇ ಅನುಮತಿ ನೀಡಬೇಕೆಂದು ಕೇಂದ್ರ ರೈಲ್ವೆ ಸಚಿವ ಪ್ರಭುರೊಂದಿಗೆ ಟ್ವಿಟರ್ ಸಂದೇಶದಲ್ಲಿ ನವೀನ್ ಪಟ್ನಾಯಕ್ ವಿನಂತಿಸಿಕೊಂಡಿದ್ದರು. ಮುಖ್ಯಮಂತ್ರಿ ಟ್ವೀಟ್ ಆಗಿ ಮೂರುನಿಮಿಷದೊಳಗೆ ರಾತ್ರೆ 10:08ಕ್ಕೆ ಯೋಜನೆ ಅನುಮತಿ
ನೀಡಲಾಗಿದೆ ಎಂದು ಸುರೇಶ್ ಪ್ರಭು ಟ್ವೀಟ್ ಮಾಡಿದರು. ರಾಜ್ಯದೊಂದಿಗೆ ಸೇರಿ ಮಾಡುವ ಯೋಜನೆಯನ್ನು ಯಾವದಿವಸ ಬೇಕಿದ್ದರೂ ಸಹಿಹಾಕಲು ಸಿದ್ಧ ಎಂದು ಪ್ರಭು ಟ್ವೀಟ್‌ನಲ್ಲಿ ಸೂಚಿಸಿದ್ದಾರೆ.