ಸಾಮಾನ್ಯರಿಗೆ ಸೂಕ್ತ ಸಮಯದಲ್ಲಿ ನೆರವು ಸಿಗದಿದ್ದರೆ, ಕಾನೂನುವ್ಯವಸ್ಥೆಯಲ್ಲಿ ನಂಬಿಕೆ ಉಳಿಯುವುದಿಲ್ಲ : ನ್ಯಾ. ಖೇಹರ್

ಹೊಸದಿಲ್ಲಿ,ಎ. 30: ಬಡವರು, ಅನಕ್ಷರಸ್ಥರಾದ ಭಾರತೀಯರಿಗೆ ಅಗತ್ಯವಿರುವ ಸಮಯದಲ್ಲಿ ಸಹಾಯ ನೀಡಲು ಆಗದಿದ್ದರೆ ಕಾನೂನುವ್ಯವಸ್ಥೆಯಲ್ಲಿ ವಿಶ್ವಾಸವೇ ಉಳಿಯುವುದಿಲ್ಲ ಎಂದು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶ ಜೆ.ಎಸ್. ಖೇಹರ್ ಹೇಳಿದ್ದಾರೆ. ಸಹಾಯ ಮಾಡುವವರು ಯಾರು ಇಲ್ಲದ ಜನಸಾಮಾನ್ಯರಿಗೆ ನೋವು, ಅನ್ಯಾಯಗಳನ್ನು ಪ್ರತಿರೋಧಿಸಲು ಪ್ಯಾರ ಲೀಗಲ್ ಸ್ವಯಂಸೇವಕರು ನೆರವು ನೀಡುತ್ತಾರೆ ಎಂದು ಖೇಹರ್ ಹೇಳಿದರು. ಅವರು ದ್ವಿದಿನ ಪ್ಯಾರಲೀಗಲ್ ಸ್ವಯಂಸೇವಕರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ದೇಶದಲ್ಲಿ ಜನಸಾಮಾನ್ಯರು ಮತ್ತು ಅನಕ್ಷಸ್ಥರಸ್ಥರೇ ಕಾನೂನು ವ್ಯವಸ್ಥೆಯ ಮುಖ್ಯ ಬಳಕೆದಾರರು ಆಗಿದ್ದಾರೆ. ನ್ಯಾಯಾಧೀಶರುಗಳ ದಿವ್ಯ ಕರ್ತವ್ಯಕ್ಕಿಂತ ಜನ ಸಾಮಾನ್ಯರಿಗಾಗಿ ಸೇವೆಸಲ್ಲಿಸುವ ಪ್ಯಾರಲೀಗಲ್ ಸ್ವಯಂಸೇವಕರ ಕರ್ತವ್ಯ ಶ್ರೇಷ್ಠವಾಗಿದೆ ಎಂದು ಖೇಹರ್ ಅಭಿಪ್ರಾಯಪಟ್ಟರು. ಈ ಸ್ವಯಂಸೇವಕರ ಮೂಲಕ ದೇಶದ ಜನಸಾಮಾನ್ಯರಿಗೆ ಸರಕಾರಿ ಯೋಜನೆಗಳು ಅರಿಯುತ್ತದೆ. ಅವರ ಸಮಸ್ಯೆಗಳಿಗೆ ಪರಿಹಾರವಾಗಬೇಕೆಂದು ಜಸ್ಟಿಸ್ ದೀಪಕ್ ಮಿಶ್ರಾ ಹೇಳಿದರು.
ಸಮಾರಂಭದಲ್ಲಿ ಮಾತಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ನ್ಯಾಯ ಜಾರಿಗೆ ತರುವುದರಲ್ಲಿ ತಂತ್ರಜ್ಞಾನದ ಅಗತ್ಯ ಮತ್ತು ಮಹತ್ವವನ್ನು ವಿವರಿಸಿದರು.