700 ರೂ. ಲಂಚ ಪಡೆದ ವಿಲೇಜ್ ಆಫೀಸರ್‌ಗೆ 2ವರ್ಷ ಜೈಲು, 20,000ರೂ. ದಂಡ !

ಕೋಟ್ಟಯಂ(ಕೇರಳ) ಎ. 30: ವಿದ್ಯಾಭ್ಯಾಸ ಸಾಲಕ್ಕಾಗಿ ಭೂಮಿಯ ಹಕ್ಕುಪತ್ರ ಮತ್ತುಮನೆಯ ಸ್ಕೆಚ್ ಪ್ಲಾನ್ ನೀಡಲು ಏಳುನೂರು ರೂಪಾಯಿ ಕೇಳಿದ ಕಾಯಂಕುಳಂ ವಿಲೇಜ್ ಆಫೀಸರ್ ಉಣ್ಣಿಕೃಷ್ಣನ್‌ರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಇಪ್ಪತ್ತುಸಾವಿರರೂಪಾಯಿ ದಂಡ ವಿಧಿಸಿ ಕೋಟ್ಟಯಂ ವಿಜಿಲೆನ್ಸ್ ಎನ್‌ಕ್ವೆಯರಿ ಕಮೀಶನರ್ ಆಂಡ್ ಸ್ಪೆಶಲ್ ಜಡ್ಜ್ ವಿ.ದಿಲೀಪ್ ತೀರ್ಪುನೀಡಿದ್ದಾರೆ.
2009ರಲ್ಲಿ ಉಣ್ಣಿಕೃಷ್ಣನ್ ಮನ್ನಾರ್ ಕುರಟಟ್ಟಿಶೇರಿ ವಿಲೇಜ್‌ಅಸಿಸ್ಟೆಂಟ್ ಆಗಿದ್ದಾಗ ದಾಖಲೆ ಕೇಳಿ ಅವರ ಬಳಿಗೆ ಬಂದ ಕುರಟಶ್ಶೇರಿ ಮರಿಯಮ್ಮ ಎನ್ನುವವರಿಂದ ಒಂದುಸಾವಿರೂಪಾಯಿ ಕೇಳಿದ್ದರು. ಮರಿಯಮ್ಮ ಎಂಟುನೂರುರೂಪಾಯಿ ನೀಡಿದ್ದರು. ಉಳಿದ 200ರೂಪಾಯಿ ಹಾಗೂ ಹೆಚ್ಚುವರಿ ಐನೂರು ರೂಪಾಯಿ ಹೀಗೆ ಮತ್ತೆ ಏಳುನೂರು ರೂಪಾಯಿ ತನಗೆ ಕೊಡಬೇಕೆಂದು ಉಣ್ಣಿಕೃಷ್ಣನ್ ಹೇಳಿದ್ದರು. ಆ ನಂತರಮರಿಯಮ್ಮ ವಿಜಿಲೆನ್ಸ್‌ಗೆ ದೂರು ನೀಡಿದರು. ಆರೋಪ ಸಾಬಿತಾಗಿದ್ದು ಉಣ್ಣಿಕೃಷ್ಣನ್‌ರಿಗೆ ಸೆಕ್ಷನ್ ಏಳು ಮತ್ತು 13 ಬಿ ಪ್ರಕಾರ ಎರಡು ವರ್ಷ ಜೈಲುಶಿಕ್ಷೆಮತ್ತು20,000ರೂಪಾಯಿ ದಂಡವನ್ನು ಕೋರ್ಟು ವಿಧಿಸಿದೆ. ಪ್ರಾಸಿಕ್ಯೂಶನ್‌ಪರ ವಿಜಿಲೆನ್ಸ್ ಕಾನೂನು ಸಲಹೆಗಾರ ಅಡ್ವೊಕೇಟ್ ರಾಜ್‌ಮೋಹನ್ ಆರ್.ಪಿಳ್ಳೆ ಹಾಜರಾಗಿದ್ದರು.