ಆಮ್ ಆದ್ಮಿಗೆ ರಾಜೀನಾಮೆ ಇಲ್ಲ: ಕುಮಾರ್ ವಿಶ್ವಾಸ್

ಹೊಸದಿಲ್ಲಿ, ಎ. 30 ಆಮ್ ಆದ್ಮಿ ಪಾರ್ಟಿಗೆ ರಾಜೀನಾಮೆ ನೀಡುವುದಿಲ್ಲ ಎಂದು ಪಾರ್ಟಿ ನಾಯಕ ಕುಮಾರ್ ವಿಶ್ವಾಸ್ ಹೇಳಿದ್ದಾರೆ. ದಿಲ್ಲಿ ನಗರಸಭೆಯಲ್ಲಿ ಆಮ್ ಆದ್ಮಿಯ ದಯನೀಯ ಸೋಲಿನ ಬಳಿಕ ಅರವಿಂದ್ ಕೇಜ್ರಿವಾಲ್‌ರನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದ ಕುಮಾರ್ ವಿಶ್ವಾಸ್ ಪಾರ್ಟಿತೊರೆಯುತ್ತಾರೆ ಎನ್ನುವ ದಟ್ಟ ವದಂತಿ ಹರಡಿತ್ತು. ಆದರೆ ಆ ವದಂತಿಯನ್ನು ವಿಶ್ವಾಸ್ ತಳ್ಳಿಹಾಕಿ, ಸ್ಪಷ್ಟಣೆ ನೀಡಿದ್ದಾರೆ.
ಆಮ್ ಆದ್ಮಿ ಚುನಾವಣಾ ಸೋಲಿಗೆ ಮತಯಂತ್ರ ವನ್ನು ಬೆಟ್ಟು ಮಾಡಿ ತೋರಿಸಿತ್ತು. ಆದರೆ ವಿಶ್ವಾಸ್, ಕೇವಲ ಮತಯಂತ್ರವನ್ನು ಮಾತ್ರ ತಪ್ಪಿತಸ್ಥ ಎನ್ನಲು ಸಾಧ್ಯವಿಲ್ಲ. ಪಾರ್ಟಿಯ ನೀತಿರೂಪೀಕರಣದಲ್ಲಿ, ಅಭ್ಯರ್ಥಿ ನಿಶ್ಚಯದಲ್ಲಿ ಆದ ಲೋಪಗಳ ಕುರಿತು ಅವಲೋಕನ ನಡೆಸಬೇಕಿದೆ . ಆಮ್ ಆದ್ಮಿ ಇನ್ನೊಂದು ಕಾಂಗ್ರೆಸ್ ಪಾರ್ಟಿ ಆಗಬಾರದೆಂದು ಸಲಹೆನೀಡಿದ್ದಾರೆ.
Next Story





