ಇನೋಳಿ: ಎಸ್ಕೆಎಸ್ಸೆಸ್ಸೆಫ್‌ನಿಂದ ಅನುಸ್ಮರಣೆ ಕಾರ್ಯಕ್ರಮ

ಮಂಗಳೂರು, ಎ.30: ಕೈಯಲ್ಲಿ ಕಲ್ಲು ಹಿಡಿಯುವ ಬದಲು ಪೆನ್ನು, ಲ್ಯಾಪ್‌ಟಾಪ್ ಹಿಡಿದು ಸುಶಿಕ್ಷಿತರಾಗಿ ಸಮುದಾಯ, ಸಮಾಜ ಸೇವೆಗೆ ಮುಂದಾಗುವ ಕೆಲಸ ಯುವಜನತೆಯಿಂದ ಆಗಬೇಕು ಎಂದು ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಇನೋಳಿ ಶಾಖೆಯ ಆಶ್ರಯದಲ್ಲಿ ಇನೋಳಿ ದಿ.ಯು.ಎಚ್.ಉಮರಬ್ಬ ವೇದಿಕೆಯಲ್ಲಿ ಶನಿವಾರ ನಡೆದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಮಜ್ಲಿಸುನ್ನೂರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಸ್ತೆಬದಿ ನಿಂತು ಪ್ರತಿಭಟನೆ ಮಾಡುವುದರಿಂದ ಅಥವಾ ಬೊಬ್ಬೆ ಹಾಕುವುದರಿಂದ ಸಮುದಾಯದ ಅಭಿವೃದ್ಧಿ ಅಸಾಧ್ಯ, ಕಾಶ್ಮೀರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದರೂ ಕೈಯಲ್ಲಿ ಕಲ್ಲು ಹಿಡಿದ ಪರಿಣಾಮ ಅಭಿವೃದ್ಧಿಯನ್ನೂ ಕಾಣದೆ ಅಭದ್ರತೆಯ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಕಿನ್ಯ ವಾದಿತ್ತೈದ ಸಂಶುಲ್ ಉಲಮಾ ಅಕಾಡಮಿಯ ಅಧ್ಯಕ್ಷ ಅಸೈಯದ್ ಅಮೀರ್ ತಂಙಳ್ ಅಲ್‌ಬುಖಾರಿ ನೇತೃತ್ವದಲ್ಲಿ ಮಜ್ಲಿಸುನ್ನೂರ್ ನಡೆಯಿತು. ಪಾಣಕ್ಕಾಡ್ ಅಸ್ಸೈಯದ್ ಶಫೀಕ್ ಅಲಿ ಶಿಹಾಬ್ ತಂಙಳ್ ದುಆ ಮಾಡಿದರು. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿದರು. ಸಲೀಂ ವಾಫಿ ಅಂಬಲಕ್ಕಂಡಿ ಮುಖ್ಯ ಭಾಷಣ ಮಾಡಿದರು.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅನುಸ್ಮರಣಾ ಭಾಷಣ ಮಾಡಿದರು. ಇಬ್ರಾಹೀಂ ಬಾಖವಿ ಕೆ.ಸಿ.ರೋಡು, ಕೋಟೆಕಾರ್ ಮುದರ್ರಿಸ್ ಹಾರೂನ್ ಅಹ್ಸನಿ, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಶಮೀಮ್ ಸಖಾಫಿ, ಹಾಫಿಳ್ ಝೈನಿ ಸಖಾಫಿ ಉಳ್ಳಾಲ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಇಬ್ರಾಹೀಂ ಕೊಣಾಜೆ, ಮುಹಮ್ಮದ್ ಮಾಸ್ಟರ್ ಮಲಾರ್, ಮಜೀದ್ ಮಾಸ್ಟರ್ ಮಲಾರ್, ಅಬ್ದುಲ್ ಸಲೀಂ ಅರ್ಶದಿ, ಇಬ್ರಾಹೀಂ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ನಡೆದ ಧ್ವಜಾರೋಹಣವನ್ನು ಎಸ್ಕೆಎಸ್ಸೆಸ್ಸೆಫ್ ಉಸ್ತುವಾರಿ ಮುಹಮ್ಮದ್ ಗಂಡಿ ನೆರವೇರಿಸಿದರು. ಮದ್ರಸ ವಿದ್ಯಾರ್ಥಿ ಅಬ್ದುಲ್ ನಾಸಿರ್ ಕಿರಾಅತ್ ಪಠಿಸಿದರು. ಮುಹಮ್ಮದ್ ರಿಯಾಝ್ ಫೈಝಿ ಸ್ವಾಗತಿಸಿದರು. ಇಬ್ರಾಹೀಂ ನೌಷಾದ್ ಇನೋಳಿ ವಂದಿಸಿದರು. ಇರ್ಫಾನ್ ಮೌಲವಿ ಕಾರ್ಯಕ್ರಮ ನಿರೂಪಿಸಿದರು.







