ಹೆಬ್ಬಾವನ್ನು ಬೆನ್ನಟ್ಟಿ ಬಂದಿದ್ದ ಕಾಳಿಂಗ ಸರ್ಪ ಮತ್ತೆ ಕಾಡಿಗೆ!
ಹಿರ್ಗಾನದ ನೆಲ್ಲಿಕಟ್ಟೆ, ಎಣ್ಣೆಹೊಳೆಯಲ್ಲಿ ಭೀತಿ ಹುಟ್ಟಿಸಿದ್ದ ಕಾಳಿಂಗ
.jpg)
ಕಾರ್ಕಳ,ಎ.30: ಕಳೆದೆರಡು ತಿಂಗಳಿನಿಂದ ಹಿರ್ಗಾದ ನೆಲ್ಲಿಕಟ್ಟೆ ಹಾಗೂ ಎಣ್ಣೆಹೊಳೆ ಪರಿಸರದಲ್ಲಿ ಭೀತಿ ಹುಟ್ಟಿಸಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ.
ಆಗುಂಬೆಯ ಮಲೆಕಾಡು ಸಂಶೋದನಾ ಕೇಂದ್ರದ ಉರಗತಜ್ಞ ಅಜಯ್ ಗಿರಿ ಆಗಮಿಸಿ ಕಾಳಿಂಗವನ್ನು ಸೆರೆ ಹಿಡಿದಿದ್ದಾರೆ.
ನೆಲ್ಲಿಕಟ್ಟೆ ಕೊತ್ತಲಿಗೆ ಎಂಬಲ್ಲಿ ಹರಿಣಿ ಎಂಬವರ ಮನೆಯಲ್ಲಿ ಕೆಲವು ದಿನಗಳಿಂದ ಹೆಬ್ಬಾವು ಕೋಳಿಗಳನ್ನು ತಿನ್ನುತ್ತಿದ್ದು ಹೆಬ್ಬಾವನ್ನು ಹಿಂಬಾಲಿಸಿಕೊಂಡು ಬಂದಿರಬಹುದೆಂದು ಸಾರ್ವಜನಿಕ ವಲಯಲ್ಲಿ ಮಾತು ಕೇಳಿ ಬರುತ್ತಿದೆ. ನೆಲ್ಲಿಕಟ್ಟೆ ಸಮೀಪದಲ್ಲಿ ಸುತ್ತಮುತ್ತಮುತ್ತಲು ನಲವತ್ತಕ್ಕೂ ಹೆಚ್ಚು ಮನೆಗಳಿದ್ದು ಪರಿಸರದ ಜನರಿಗೆ ಮಕ್ಕಳಿಗೆ ಹಾವಿನ ಭೀತಿ ಎದುರಾಗಿತ್ತು.
ಕಳೆದ 2 ತಿಂಗಳ ಹಿಂದೆ ಎಣ್ಣೆಹೊಳೆ ನದಿಯಲ್ಲಿ ಹೆಬ್ಬಾವು ಹಾಗೂ ಕಾಳಿಂಗ ಸಂಘರ್ಷ ನಡೆದಿತ್ತು ಈ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿ ಕಾಳಿಂಗ ಸರ್ಪವನ್ನು ವೀಕ್ಷಿಸಿ ಹೋಗುತ್ತಿದ್ದರು.
ಸಾರ್ವಜನಿಕರ ಅಪೇಕ್ಷೆಯಂತೆ ಹಾವನ್ನು ಹಿಡಿಯಲು ಉರಗತಜ್ಮರನ್ನು ಕರೆಸಲಾಯಿತು .ಹಾವನ್ನು ಹಿಡಿದ ಉರಗತಜ್ಞ ನಂತರ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.
ಹಾವುಗಳ ಸಂತತಿಗಳು ಕ್ಷೀಣಿಸುತ್ತಿವೆ ,ಹಾವುಗಳು ಹೆಗ್ಗಣಗಳ ಜನ್ಮ ಶತ್ರು, ಪರಿಸರ ಸಮತೋಲನ ಕಾಪಾಡಲು ಹಾವುಗಳ ಪಾತ್ರ ಮಹತ್ವದ್ದು , ಹಾವುಗಳು ನಿರುಪದ್ರವಿ ಆದರೆ ,ಅನ್ಯಾಯ ಮಾಡದೆ ಶಾಂತ ಚಿತ್ತದಿಂದ ವರ್ತಿಸಿಕೊಳ್ಳಬೇಕು ,ಹಿಡಿಯಲು ಪ್ರಯತ್ನಿಸಬಾರದು ಎಂದು ಉರಗತಜ್ಞ ಅಜಯ್ ಗಿರಿ ಜನರಿಗೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದರು







