ಸುಯರೆಝ್ ಅವಳಿ ಗೋಲು: ಬಾರ್ಸಿಲೋನಕ್ಕೆ ಜಯ
ಬಾರ್ಸಿಲೋನ, ಎ.30: ಸ್ಪಾನೀಶ್ ಲಾಲಿಗ ಪಂದ್ಯದಲ್ಲಿ ಲೂಯಿಸ್ ಸುಯರೆಝ್ ಬಾರಿಸಿದ ಅವಳಿ ಗೋಲು ನೆರವಿನಿಂದ ಎಸ್ಪಾನಿಯೊಲ್ ತಂಡವನ್ನು 3-0 ಅಂತರದಿಂದ ಮಣಿಸಿದ ಬಾರ್ಸಿಲೋನ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
ಬಾರ್ಸಿಲೋನದ ಪರ ಸುಯರೆಝ್ 50ನೆ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. 76ನೆ ನಿಮಿಷದಲ್ಲಿ ಗೋಲು ಬಾರಿಸಿದ ಇವಾನ್ ರಾಕ್ಟಿಕ್ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.
87ನೆ ನಿಮಿಷದಲ್ಲಿ ಗೋಲು ಬಾರಿಸಿರುವ ಸುಯರೆಝ್ ಬಾರ್ಸಿಲೋನ 3-0 ಅಂತರದಿಂದ ಜಯ ಸಾಧಿಸಲು ನೆರವಾದರು.
ಕಳೆದ 5 ಪಂದ್ಯಗಳಲ್ಲಿ ಗೋಲು ಬಾರಿಸಲು ವಿಫಲವಾಗಿದ್ದ ಸುಯರೆಝ್ ಇದೀಗ ಗೋಲು ಬರವನ್ನು ನೀಗಿಸಿಕೊಂಡರು.
Next Story