ಸನ್‌ರೈಸರ್ರ್ಸ್ ಗೆ 48 ರನ್‌ಗಳ ಜಯ

ಹೈದರಾಬಾದ್, ಎ.30: ಸನ್‌ರೈಸರ್ರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ 37ನೆ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 48 ರನ್‌ಗಳ ಜಯ ಗಳಿಸಿದೆ.
ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ರವಿವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲುವಿಗೆ 210 ರನ್‌ಗಳ ಕಠಿಣ ಸವಾಲು ಪಡೆದ ಕೋಲ್ಕತಾ ನೈಟ್‌ರೈಡರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 161 ರನ್ ಗಳಿಸಿತು.
ಆರಂಭದಲ್ಲಿ ಕಕೆಆರ್‌ನ ಬ್ಯಾಟಿಂಗ್‌ಗೆ ಮಳೆ ಅಡ್ಡಿಪಡಿಸಿತ್ತು. 7 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 52 ರನ್ ಗಳಿಸಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು.
ಬಳಿಕ ಮತ್ತೆ ಆಟ ಆರಂಭಗೊಂಡರೂ ಕೆಕೆಆರ್‌ಗೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಉತ್ತಪ್ಪ 53 ,ಯೂಸುಫ್ ಪಠಾಣ್ 12 ರನ್ ,ನರೇನ್ 1ರನ್, ಗಂಭೀರ್11 ರನ್, ಎಂ.ಪಾಂಡ್ಯ 39ರನ್ ,ಜಾಕ್ಸನ್ 16ರನ್, ಗ್ರಾಂಡ್‌ಹೊಮೆ 18 ರನ್ , ವೋಕ್ಸ್ ಔಟಾಗದೆ 6ರನ್ ಗಳಿಸಿದರು.
ಸನ್‌ರೈಸರ್ಸ್ ತಂಡದ ಭುವನೇಶ್ವರ ಕುಮಾರ್, ಮುಹಮ್ಮದ್ ಸಿರಾಜ್, ಮತ್ತು ಎಸ್.ಕೌಲ್ ತಲಾ 2 ವಿಕೆಟ್ , ರಶೀದ್ ಖಾನ್ 1 ವಿಕೆಟ್ ಪಡೆದರು.
ಶತಕ ದಾಖಲಿಸಿದ ಸನ್‌ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್ ವಿವರ
ಸನ್‌ರೈಸರ್ಸ್ 20 ಓವರ್‌ಗಳಲ್ಲಿ 209/3( ವಾರ್ನರ್ 126, ವಿಲಿಯಮ್ಸನ್ 40, ಧವನ್ 29; ವೋಕ್ಸ್ 46ಕ್ಕೆ 1).
ಕೋಲ್ಕತಾ ನೈಟ್‌ರೈಡರ್ಸ್ 20 ಓವರ್‌ಗಳಲ್ಲಿ 161/7( ಉತ್ತಪ್ಪ 53, ಪಾಂಡೆ 39; ಕೌಲ್ 26ಕ್ಕೆ 2).
ಪಂದ್ಯಶ್ರೇಷ್ಠ : ಡೇವಿಡ್ ವಾರ್ನರ್.
,,,,,





