ಸಂಸದನಿಗೇ ಹನಿ ಟ್ರ್ಯಾಪ್: ಮಹಿಳೆಯಿಂದ 5 ಕೋಟಿ ರೂ.ಗೆ ಬೇಡಿಕೆ

ಹೊಸದಿಲ್ಲಿ, ಮೇ 1: ಅಮಲು ಪದಾರ್ಥ ನೀಡಿ ಅಸಭ್ಯ ರೀತಿಯಲ್ಲಿ ತಾನು ಮಹಿಳೆಯೊಂದಿಗಿರುವ ಚಿತ್ರಗಳನ್ನು ಸೆರೆಹಿಡಿದಿರುವ ಮಹಿಳೆಯೋರ್ವಳು 5 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದು, ಹಣ ನೀಡದೇ ಹೋದಲ್ಲಿ ವಿಡಿಯೋವನ್ನು ಬಿಡುಗಡೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾಳೆಂದು ಸಂಸದರೋರ್ವರು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆಯೊಬ್ಬಳು ತನ್ನಿಂದ ಸಹಾಯಯಾಚಿಸಿ ಗಜಿಯಾಬಾದಿನ ಮನೆಯೊಂದಕ್ಕೆ ಬರ ಹೇಳಿದ್ದಳು. ಅಲ್ಲಿ ಅಮಲು ಪದಾರ್ಥ ಸೇರಿಸಲಾಗಿದ್ದ ತಂಪು ಪಾನೀಯ ನೀಡಿದಾಗ ತಾನು ಪ್ರಜ್ಞೆ ಕಳೆದುಕೊಂಡಿದ್ದು, ಈ ಸಂದರ್ಭ ಮಹಿಳೆಯೊಂದಿಗಿರುವ ಅಸಭ್ಯ ರೀತಿಯ ಚಿತ್ರಗಳನ್ನು ತೆಗೆಯಲಾಗಿದೆ ಎಂದವರು ದೂರಿದ್ದಾರೆ.
ಘಟನೆಯ ಸಂಬಂಧ ಎಫ್ ಐ ಆರ್ ದಾಖಲಾಗಿದೆ. ಆರೋಪಿ ಮಹಿಳೆ ಬ್ಲ್ಯಾಕ್ ಮೇಲ್ ಜಾಲವನ್ನು ತನ್ನ ಸಹವರ್ತಿಗಳೊಂದಿಗೆ ನಡೆಸುತ್ತಿದ್ದಾಳೆಂದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.
Next Story





