122 ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚಲು ಸಿದ್ಧ!

ಹೊಸದಿಲ್ಲಿ,ಮೇ. 1: ದೇಶದಲ್ಲಿ 122 ಇಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಸಿದ್ಧತೆ ನಡೆಯುತ್ತಿದೆ. ಪ್ರೊಗ್ರೆಸ್ಸಿವ್ ಕ್ಲೋಸರ್ ಎನ್ನುವ ಕ್ರಮದ ಪ್ರಕಾರ ಇವುಗಳನ್ನು ಮುಚ್ಚಲಾಗುತ್ತಿದೆ. ಆದ್ದರಿಂದ ಇಲ್ಲಿ ಹೊಸ ಪ್ರವೇಶಾತಿ ನಡೆಯುವುದಿಲ್ಲ. ಈಗ ಅಲ್ಲಿಕಲಿಯುತ್ತಿರುವ ಬ್ಯಾಚ್‌ಗಳ ವಿದ್ಯಾರ್ಥಿಗಳು ಅಧ್ಯಯನವನ್ನು ಅಲ್ಲಿಯೇ ಮುಂದುವರಿಸಬಹುದು. ಮಹಾರಾಷ್ಟ್ರ, ಗುಜರಾತ್, ಹರಿಯಾಣದ ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚುಗಡೆಯಾಗಲಿದೆ.
ಆಲ್ ಇಂಡಿಯ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ವರದಿ ಪ್ರಕಾರ ಪುಣೆ, ನಾಗ್‌ಪುರ, ಔರಂಗಾಬಾದ್, ಜಲ್‌ಗಾವ್, ಕೋಲಾಪುರಮುಂತಾದೆಡೆಗಳಲ್ಲಿ 23 ಇಂಜಿನಿಯರಿಂಗ್ ಕಾಲೇಜುಗಳು 2016-17ನೆ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಮುಚ್ಚಿಕೊಂಡಿದೆ. ಅಸ್ತಿತ್ವಕ್ಕೆ ಅಪಾಯ ಎದುರಿಸುವ ಕಾಲೇಜುಗಳು ಒಂದೊ ಪ್ರೊಗ್ರಿಸ್ಸಿವ್ ಕ್ಲೋಸರ್ ಆಯ್ಕೆ ಮಾಡಬೇಕು. ಇಲ್ಲದಿದ್ದರೆ,ಪಾಲಿಟೆಕ್ನಿಕ್, ಆರ್ಟ್ಸ, ಸಯನ್ಸ್ ಕಾಲೇಜಿಗೆ ಬದಲಿಸಿಕೊಳ್ಳಬೇಕು. ಗುಜರಾತ್‌ನಲ್ಲಿ 15 ಇಂಜಿನಿಯರಿಂಗ್ ಕಾಲೇಜು, ತೆಲಂಗಾಣದಲ್ಲಿ ಏಳು, ಕರ್ನಾಟಕದಲ್ಲಿ 11, ಉತ್ತರಪ್ರದೇಶದಲ್ಲಿ 12, ಪಂಜಾಬ್‌ನಲ್ಲಿ 6,ರಾಜಸ್ತಾನದಲ್ಲಿ 11, ಹರಿಯಾಣದಲ್ಲಿ 13ಕಾಲೇಜುಗಳು ಈ ಕಾಲಾವಧಿಯಲ್ಲಿ ಮುಚ್ಚುಗಡೆಯಾಗಿದೆ. ಅದೇವೇಳೆ ದಿಲ್ಲಿಯಲ್ಲಿ ಒಂದು ಕಾಲೇಜು ಮಾತ್ರವೇ ಮುಚ್ಚುಗಡೆಯಾಗಿದೆ.





