‘ಬಾಹುಬಲಿ 2’ ಮೂರೇ ದಿನಗಳಲ್ಲಿ ಗಳಿಸಿದ್ದೆಷ್ಟು ಗೊತ್ತೇ ?

ಮುಂಬೈ,ಮೇ 1: ತನ್ನ ಭರ್ಜರಿ ಆರಂಭ ಮತ್ತು ವಾರಾಂತ್ಯದ ದಿನಗಳ ಬೃಹತ್ ಗಳಿಕೆಯಿಂದ ಎಸ್.ಎಸ್.ರಾಜಮೌಳಿಯವರ ‘ಬಾಹುಬಲಿ 2:ದಿ ಕನ್‌ಕ್ಲೂಸನ್’ ವಿಶ್ವಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ಬಹುಭಾಷಾ ಚಿತ್ರ ವಾರಾಂತ್ಯದಲ್ಲಿ ಎಲ್ಲ ಭಾಷೆಗಳಲ್ಲಿ ಪ್ರದರ್ಶನ ಸೇರಿದಂತೆ ವಿಶ್ವಾದ್ಯಂತ ಒಟ್ಟು 506 ಕೋ.ರೂ.ಗಳಿಕೆಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ ಎಂದು ಬಾಕ್ಸ್ ಆಫೀಸ್ ಇಂಡಿಯಾ ಡಾಟ್ ಕಾಮ್ ವರದಿ ಮಾಡಿದೆ.
ಭಾರತದಲ್ಲಿ ಚಿತ್ರದ ಗಳಿಕೆ 385 ಕೋ.ರೂ.ಗಳಾಗಿದ್ದರೆ ವಿದೇಶಗಳಿಂದ 121 ಕೋ.ರೂ.ಗಳ ಆದಾಯ ಹರಿದು ಬಂದಿದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ‘ಬಾಹುಬಲಿ 2’ ಚಿತ್ರದ ಗಳಿಕೆ ಹಿಂದಿನ ಎಲ್ಲ ದಾಖಲೆಗಳನ್ನು ನುಚ್ಚುನೂರು ಮಾಡಿದೆ. ಇಷ್ಟೇ ಅಲ್ಲ, ಬಿಡುಗಡೆಗೂ ಮೊದಲಿನ ಪ್ರಿವ್ಯೆಗಳ ಗಳಿಕೆಯನ್ನೂ ಸೇರಿಸಿದರೆ ಈ ಮೊತ್ತ 520 ರೂ.ಗಳನ್ನು ದಾಟುತ್ತದೆ.
Next Story





