ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ: ಉದ್ಯಮಶೀಲತಾ ಕಾರ್ಯಾಗಾರ ಸಮಾರೋಪ

ಮಂಗಳೂರು, ಮೇ 1: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ 6 ದಿನಗಳ ಕಾಲ ನಡೆದ ಉದ್ಯಮಶೀಲತಾ ಕಾರ್ಯಾಗಾರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಝಕರಿಯ ಜೋಕಟ್ಟೆ ಶಿಬಿರಾರ್ಥಿಗಳಿಗೆ ಸರ್ಟಿಫಿಕೆಟ್ ಗಳನ್ನು ವಿತರಿಸಿದರು. ಆ ಸಂದರ್ಭ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಹಾಗೂ ಮ್ಯಾನೇಜರ್ ಖಾಲಿದ್ ತಣ್ಣೀರು ಬಾವಿ ಉಪಸ್ಥಿತರಿದ್ದರು.
Next Story





