ಗೇಟು ಕುಸಿದು ಮೈಮೇಲೆ ಬಿದ್ದು ಮಗು ಮೃತ್ಯು
ಮೂಡುಬಿದಿರೆ, ಮೇ 1: ಮನೆಯ ಗೇಟು ಮತ್ತು ಕುಂದ ಕುಸಿದು ಬಿದ್ದು ಮೂರು ವರ್ಷದ ಮಗು ಮೃತಪಟ್ಟ ಘಟನೆ ಶಿರ್ತಾಡಿ ಗ್ರಾಮದ ದಡ್ಡಲ್‌ಪಲ್ಕೆಯಲ್ಲಿ ನಡೆದಿದೆ.
ಶೃಂಗೇರಿ ಕೊಪ್ಪದ ಸ್ಟಿವನ್ ಡಿಸೋಜ ಎಂಬವರ ಪುತ್ರಿ ಸಿಯೋನ್ ಡಿಸೋಜ (3) ಮೃತಪಟ್ಟ ಮಗು. ಸ್ಟಿವನ್ ಡಿಸೋಜರ ಪತ್ನಿ ರಜೆಯ ನಿಮಿತ್ತ ಮಗುವಿನೊಂದಿಗೆ ಅಜ್ಜಿ ಮನೆಗೆ ಬಂದಿದ್ದರು. ರವಿವಾರ ಸಂಜೆ ಅಜ್ಜಿ ಐರಾ ಡಿಸೋಜ ಅವರೊಂದಿಗೆ ಪಕ್ಕದ ಮನೆಗೆ ಹೋಗುವ ವೇಳೆ ಗೇಟನ್ನು ದೂಡಿದಾಗ ಗೇಟು ಹಾಗೂ ಕುಂದ ಮಗುಚಿ ಬಿದ್ದು ಸಿಯೋನ್ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಮಗು ಅದಾಗಲೇ ಮೃತಪಟ್ಟಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story





