ಹುತಾತ್ಮ ಯೋಧ ಬನ್ಮಾಲಿ ಪತ್ನಿಗೆ ಎಎಸ್‌ಐ ಹುದ್ದೆ ನೀಡಿದ ಛತ್ತೀಸ್ ಗಡ ಸರಕಾರ

ರಾಯಿಪುರ, ಮೇ 1: ಸುಕ್ಮಾ ಜಿಲ್ಲೆಯಲ್ಲಿ ಇತ್ತೀಚೆಗೆ ನಕ್ಸಲರ ದಾಳಿಗೆ ಬಲಿಯಾದ ಸಿಆರ್ ಪಿಎಫ್ ಯೋಧ ಬನ್ಮಾಲಿ ಯಾದವ್ ಅವರ ಪತ್ನಿಗೆ ಛತ್ತೀಸ್ ಗಡ ಸರಕಾರ ಪೊಲೀಸ್ ಇಲಾಖೆಯಲ್ಲಿ ಎಎಸ್ ಐ ಹುದ್ದೆ ನೀಡಿದೆ.
ಛತ್ತೀಸ್ ಗಡದ ಮುಖ್ಯ ಮಂತ್ರಿ ರಮಣ್ ಸಿಂಗ್ ಅವರು ಜಶ್ ಪುರ್ ಜಿಲ್ಲೆಯ ಧೌರಾಸಂದ್ ಗ್ರಾಮದಲ್ಲಿರುವ ಹುತಾತ್ಮ ಯೋಧ ಯೋಧ ಬನ್ಮಾಲಿ ಯಾದವ್ ಮನೆಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ ಬನ್ಮಾಲಿ ಯಾದವ್ ಅವರ ಪತ್ನಿ ಜಿತೇಶ್ವರಿಗೆ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ (ಎಎಸ್ಐ) ಹುದ್ದೆಗೆ ನೇಮಕ ಮಾಡಿರುವ ಬಗ್ಗೆ ನೇಮಕಾತಿ ಪತ್ರವನ್ನು ಮುಖ್ಯ ಮಂತ್ರಿ ರಮಣ್ ಸಿಂಗ್ ನೀಡಿದರು.
ಎ.24ರಂದು ಸುಕ್ಮಾದಲ್ಲಿ ನಡೆದಿದ್ದ ನಕ್ಸಲ್ ದಾಳಿಯಲ್ಲಿ ಸಿಆರ್ ಪಿಎಫ್ ಯೋಧ ಬನ್ಮಾಲಿ ಯಾದವ್ ಸೇರಿದಂತೆ ಒಟ್ಟು 25 ಮಂದಿ ಯೋಧರು ಹುತಾತ್ಮರಾಗಿದ್ದರು.
Next Story





