ಕ್ಯಾಬ್ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ
ಬೆಂಗಳೂರು, ಮೇ 1: ಮಹಿಳೆಯೊಬ್ಬರನ್ನು ಡ್ರಾಪ್ ಮಾಡಲು ಕರೆದೊಯ್ಯುತ್ತಿದ್ದ ಕ್ಯಾಬ್ ಚಾಲಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ದುರ್ಘಟನೆ ಇಲ್ಲಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣ ಸಂಬಂಧ 32 ವರ್ಷದ ರಕ್ಷಾ(ಹೆಸರು ಬದಲಿಸಲಾಗಿದೆ) ಎಂಬವರು ಪೊಲೀಸರಿಗೆ ಕ್ಯಾಬ್ ಚಾಲಕ ರವಿಕುಮಾರ್ ಎಂಬವನ ವಿರುದ್ಧ ದೂರು ನೀಡಿದ್ದಾರೆ. ಎಪ್ರಿಲ್ 28ರಂದು ರಕ್ಷಾ ಇಲ್ಲಿನ ಕೋರಮಂಗಲದಿಂಧ ಬೊಮ್ಮನಹಳ್ಳಿಗೆ ತೆರಳಲು ಉಬರ್ ಕಾರನಲ್ಲಿ ತಡರಾತ್ರಿ ತೆರಳುತ್ತಿದ್ದರು ಎಂದು ಹೇಳಲಾಗಿದೆ.
ಈ ವೇಳೆ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಇಲ್ಲಿನ ಬೊಮ್ಮನಹಳ್ಳಿ- ಬೇಗೂರು ರಸ್ತೆಯಲ್ಲಿ ಕ್ಯಾಬ್ ಚಾಲಕ ರವಿಕುಮಾರ್ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಬೊಮ್ಮನಹಳ್ಳಿ ಠಾಣಾ ಪೊಲೀಸರು ಆರೋಪಿ ಕ್ಯಾಬ್ ಚಾಲಕ ರವಿಕುಮಾರ್ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.





