ಜಾತಿ ವ್ಯವಸ್ಥೆ ಕುರಿತ ಹಳೆಯ ಪೋಸ್ಟ್: ಬಾಹುಬಲಿ ನಿರ್ದೇಶಕ ರಾಜಮೌಳಿ ವಿರುದ್ಧ ಆಕ್ರೋಶ

ಹೈದರಾಬಾದ್,ಮೇ.2 : 'ಬಾಹುಬಲಿ 2-ದಿ ಕಂಕ್ಲೂಶನ್' ಚಿತ್ರ ವೀಕ್ಷಿಸಿದ ಸಾವಿರಾರು ಮಂದಿ ಅದರ ನಿರ್ದೇಶಕ ಎಸ್ ಎಸ್ ರಾಜಮೌಳಿಗೆ ಪ್ರಶಂಸೆಯ ಮಹಾಪೂರವೇ ಹರಿಸುತ್ತಿದ್ದರೆ ಇನ್ನು ಕೆಲವರು ರಾಜಮೌಳಿ ಐದು ವರ್ಷಗಳ ಹಿಂದೆ ಜಾತಿ ವ್ಯವಸ್ಥೆ ಬಗ್ಗೆ ಮಾಡಿದ್ದ ಹಳೆಯ ಪೋಸ್ಟ್ ಒಂದನ್ನು ಮುಂದಿಟ್ಟುಕೊಂಡು ಅವರ ವಿರುದ್ಧ ಫೇಸ್ ಬುಕ್ ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜಮೌಳಿ ಐದು ವರ್ಷದ ಹಿಂದೆ ಮಾಡಿದ್ದ ಫೇಸ್ ಬುಕ್ ಪೋಸ್ಟ್ ನಲ್ಲಿ ಹೀಗೆಂದು ಬರೆದಿದ್ದರು. ‘‘ಮನುಸ್ಮತಿಯಂತೆ ಜಾತಿ ವ್ಯವಸ್ಥೆ ನಮ್ಮ ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆಯೇ ಹೊರತು ನಮ್ಮ ಜನ್ಮದಿಂದಲ್ಲಿ. ನಾನು ಜತೆಯಾಗಿ ಟೆನಿಸ್ ಆಡುವ ಪ್ರಸಾದ್ ಎಂಬವರು ಇನ್ನೂ ಒಳ್ಳೆಯ ವಿವರಣೆ ನೀಡಿದ್ದಾರೆ.
ಪಂಚಮಜಾತಿ (ಅಸ್ಪಶ್ಯರು) ಜೀವನ ಸಾಗಿಸಲು ಇನ್ನೊಬ್ಬರ ಮೇಲೆ ಅಲಂಬಿತರಾದವರು (ಪ್ಯಾರಸೈಟ್).
ಶೂದ್ರ- ತನಗಾಗಿ ಹಾಗೂ ತನ್ನ ಕುಟುಂಬಕ್ಕಾಗಿ ಬಾಳುವವನು.
ವೈಶ್ಯ- ತನಗಾಗಿ ಹಾಗೂ ತಾನು ಜತೆಯಾಗಿ ವ್ಯಾಪಾರ ಮಾಡುವವನಿಗಾಗಿ ಲಾಭ ತರುವವನು.
ಕ್ಷತ್ರಿಯ - ತನ್ನ ಕೆಳಗಿನವರು ಆಹಾರ ಸೇವಿಸಿದ ಮೇಲೆ ಆಹಾರ ಸೇವಿಸುವವನು.
ಬ್ರಾಹ್ಮಣ - ಮೊದಲು ಕಲಿತು ನಂತರ ಕಲಿಸುವವ.’’
ರಾಜಮೌಳಿಯ ಈ ಪೋಸ್ಟ್ ಓದಿದ ಕೆಲವರು ಅವರನ್ನು ಅಪಹಾಸ್ಯ ಮಾಡಿದರೆ ಇನ್ನು ಕೆಲವರು ಅವರನ್ನು ಮೂರ್ಖ ಎಂದು ಬಣ್ಣಿಸಿದ್ದಾರೆ.
ಏನೇ ಇರಲಿ ಈ ವಿವಾದ ಬಾಹುಬಲಿ 2 ಮೇಲೆ ಪರಿಣಾಮ ಬೀರಿಲ್ಲವಾಗಿದ್ದು ಅದು ಎಲ್ಲಾ ಬಾಕ್ಸಾಫೀಸ್ ದಾಖಲೆಗಳನ್ನು ಮೀರಿ ಮುನ್ನುಗ್ಗುತ್ತಿದೆ.







