ದಲಿತ ನ್ಯಾಯಾಧೀಶರೊಬ್ಬರಿಗೆ ಅವಮಾನ: ಸುಪ್ರೀಂ ಆದೇಶ ವಿರುದ್ಧ ನ್ಯಾ. ಕರ್ಣನ್ ಕಿಡಿ

ಹೊಸದಿಲ್ಲಿ, ಮೇ 2: ತನ್ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೋಲ್ಕತಾ ಹೈಕೋರ್ಟ್‌ನ ಜಡ್ಜ್ ಸಿ.ಎಸ್ ಕರ್ಣನ್ ಅವರು ಈ ಆದೇಶದಿಂದ ದಲಿತ ನ್ಯಾಯಾಧೀಶರೊಬ್ಬರಿಗೆ ಅವಮಾನ ಮಾಡಿದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಮೇ.4 ರಂದು ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ಸುಪ್ರೀಂಕೋರ್ಟ್ ನ ಏಳು ಸದಸ್ಯ ಪೀಠದ ಆದೇಶ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು "ಈ ಆದೇಶ ಹಾಸ್ಯಾಸ್ಪದ ” ಎಂದು ಕರ್ಣನ್ ಅಭಿಪ್ರಾಯಪಟ್ಟಿದ್ದಾರೆ.
"ನಾನೊಬ್ಬ ದಲಿತ ಎಂಬ ಕಾರಣಕ್ಕೆ ನನ್ನ ಮೇಲೆ ಇಂತಹ ಆದೇಶ ನೀಡಲಾಗುತ್ತಿದೆ. ನನ್ನ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಳು ನ್ಯಾಯಾಧೀಶರು ಭ್ರಷ್ಟರು. ಒಂದು ವೇಳೆ, ಪಶ್ಚಿಮ ಬಂಗಾಳ ಡಿಜಿಪಿ ನನ್ನ ಒಪ್ಪಿಗೆ ಪಡೆಯದೇ ಏನಾದರೂ ನಡೆದುಕೊಂಡರೆ ಅವರ ವಿರುದ್ಧ ಆದೇಶ ಹೊರಡಿಸುತ್ತೇನೆಂದು ಎಂದು ಹೇಳಿದ್ದಾರೆ.
"ನನ್ನ ವಿರುದ್ಧ ಆದೇಶ ಹೊರಡಿಸಿದ ಸುಪ್ರೀಂಕೋರ್ಟ್ ನ ಏಳು ನ್ಯಾಯಾಧೀಶರುಗಳನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಯ ಮಾನಸಿಕ ವಿಭಾಗದಲ್ಲಿ ತಪಾಸಣೆಗೆ ಒಳಪಡಿಸಬೇಕು. ಮೇ.7ರೊಳಗಾಗಿ ಈ ಬಗ್ಗೆ ನನಗೆ ವರದಿ ಸಲ್ಲಿಸಬೇಕು "ಎಂದು ನಾನು ದಿಲ್ಲಿ ಡಿಜಿಪಿಗೆ ಆದೇಶ ನೀಡುತ್ತೇನೆ" ಎಂದು ಕರ್ಣನ್ ಗುಡುಗಿದ್ದಾರೆ.





