ಅನಂತ್ ನಾಗ್ ಕ್ಷೇತ್ರದ ಉಪ ಚುನಾವಣೆ ರದ್ದು

ಶ್ರೀನಗರ, ಮೇ 2: ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಿನ್ನಲೆಯಲ್ಲಿ ಮೇ 25ರಂದು ನಡೆಯಬೇಕಿದ್ದ ಅನಂತ್ ನಾಗ್ ಕ್ಷೇತ್ರದ ಉಪ ಚುನಾವಣೆಯನ್ನು ಚುನಾವಣಾ ಆಯೋಗ ಇಂದು ರದ್ದುಪಡಿಸಿದೆ.
ಕಣಿವೆ ರಾಜ್ಯದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಅನುಕೂಲಕರ ವಾತಾವರಣ ಇಲ್ಲದಿರುವುದರಿಂದ ಕೆಲವು ರಾಜಕೀಯ ಪಕ್ಷಗಳು ಕೂಡ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
. ಚುನಾವಣಾ ಆಯೋಗ ಈ ಮೊದಲು ಎಪ್ರಿಲ್ 12ರಂದು ಚುನಾವಣೆ ನಡೆಸುವುದಾಗಿ ಹೇಳಿತ್ತು. ಆದರೆ ಆಗ ನಡೆಸಲು ಸಾಧ್ಯವಾಗದೆ ಮೇ 25ಕ್ಕೆ ಮುಂದೂಡಿತ್ತು.
Next Story