ಸಾವಿನಲ್ಲೂ ಒಂದಾದ ತಾಯಿ-ಮಗ

ಕೊಪ್ಪಳ, ಮೇ 2: ತಾಯಿ ನಿಧನದ ಸುದ್ದಿ ತಿಳಿದು ಮಗ ಹೃದಯಘಾತದಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ಕೊಪ್ಪಳದ ಚುಕ್ಕನಕಲ್ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ 4 ಗಂಟೆಗೆ ಚುಕ್ಕನಕಲ್ ಗ್ರಾಮದ ಎಂಬತ್ತು ವರ್ಷದ ರೇಣುಕಮ್ಮ ಅನಾರೋಗ್ಯದಿಂದ ನಿಧನರಾಗಿದ್ದರು. ಇವರು ನಿಧನರಾದ ಸುದ್ದಿ ಮಗ ಯಲ್ಲಪ್ಪರೆಡ್ಡಿಗೆ ಮೂರು ಗಂಟೆಯ ಬಳಿಕ ಗೊತ್ತಾಯಿತು, ಸುದ್ದಿ ತಿಳಿದು ಆಘಾತಗೊಂಡ ಯಲ್ಲಪ್ಪ ರೆಡ್ಡಿ ಕುಸಿದು ಬಿದ್ದರು. ಹೃದಯಾಘಾತದಿಂದ ಮೃತಪಟ್ಟರು ಎಂದು ತಿಳಿದು ಬಂದಿದೆ.
ತಾಯಿ-ಮಗನ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ನೆಲೆಸಿದೆ.
Next Story





