ಪ್ರಯಾಣಿಕರು ತುಂಬಿದ್ದ ಬಸ್ ಗಳಲ್ಲೇ ರೇಸ್ ಗಿಳಿದ ಚಾಲಕರು !
ವೈರಲ್ ವೀಡಿಯೊ
.jpg)
ಕೋಯಮತ್ತೂರ್,ಮೇ. 2: ಖಾಸಗಿ ಬಸ್‌ಗಳ ಅಮಿತ ವೇಗದ ಕುರಿತು ಹಲವಾರು ಮಾಧ್ಯಮ ವರದಿಗಳನ್ನು ನಾವು ಓದುತ್ತೇವೆ. ಆದರೆ ಅವೆಲ್ಲ ಕಳಾಹೀನಗೊಳ್ಳುವಂತೆ ಬಸ್‌ಚಾಲಕರ ಚಾಲನಾ ಪೈಪೋಟಿಯ ಒಂದು ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೋಯಮತ್ತೂರಿನ ಪೊಳ್ಳಾಚ್ಚಿ ಹೆದ್ದಾರಿಯಲ್ಲಿ ಈ ಘಟನೆನಡೆದಿದೆ.
ಪರಸ್ಪರ ಸ್ಪರ್ಧೆಯಲ್ಲಿ ಎರಡು ಬಸ್‌ಗಳು ಓಡುತ್ತಿವೆ. ಅದನ್ನು ಕಂಡವರ ಎದೆಬಡಿತವೇ ನಿಂತುಹೋಗಬಹುದು. ಹೀಗಾದರೆ ಅದರೊಳಗೆ ಕೂತವರ ಪರಿಸ್ಥಿತಿ ಹೇಗಿದ್ದೀತು?
ಸ್ಪರ್ಧೆಯ ಕಾವೇರಿಸಿಕೊಂಡು ಎರಡು ಬಸ್‌ಗಳು ರಸ್ತೆಯ ಇನ್ನೊಂದು ಬದಿಗೆಹೋಗುತ್ತಿವೆ. ಎದುರುಗಡೆಯಿಂದ ಬರುತ್ತಿದ್ದ ಇತರ ವಾಹನಗಳು ಬಹಳ ಕಷ್ಟದಿಂದ ಇವೆರಡು ಬಸ್ ಗಳನ್ನು ನಿವಾರಿಸಿಕೊಂಡು ಮುಂದೆ ಸಾಗುತ್ತಿವೆ.
ಆದರೆ ಇಲ್ಲಿಗೆ ಈವಿಷಯ ಕೊನೆಗೊಳ್ಳಲಿಲ್ಲ. ವೀಡಿಯೊ ಬಹಿರಂಗಗೊಂಡೊಡನೆ ಇಬ್ಬರು ಚಾಲಕರ ಲೈಸನ್ಸನ್ನು ಅಧಿಕಾರಿಗಳು ರದ್ದುಪಡಿಸಿದ್ದಾರೆ. ಇಬ್ಬರ ಕೆಲಸವೂ ಗೋತಾ.
Next Story





