ಗಡಿ ದಾಟಿಲ್ಲ, ಸೈನಿಕರ ದೇಹ ವಿಕೃತಗೊಳಿಸಿಲ್ಲ: ಪಾಕ್

ಇಸ್ಲಾಮಾಬಾದ್, ಮೇ 2: ತನ್ನ ಸೈನಿಕರು ನಿಯಂತ್ರಣ ರೇಖೆ ದಾಟಿ ಹೋಗಿಲ್ಲ ಹಾಗೂ ಭಾರತೀಯ ಸೈನಿಕರ ದೇಹಗಳನ್ನು ವಿಕೃತಗೊಳಿಸಿಲ್ಲ ಎಂದು ಪಾಕಿಸ್ತಾನದ ಸೇನೆ ಮಂಗಳವಾರ ಹೇಳಿಕೊಂಡಿದೆ.
ನಡೆಯಿತೆನ್ನಲಾದ ಘಟನೆಯ ಬಗ್ಗೆ ಮಾತುಕತೆ ನಡೆಸಲು ರಾವಲ್‌ಕೋಟ್-ಪೂಂಚ್ ವಲಯದಲ್ಲಿರುವ ಉಭಯ ದೇಶಗಳ ಸ್ಥಳೀಯ ಕಮಾಂಡರ್‌ಗಳ ನಡುವೆ ಹಾಟ್‌ಲೈನೊಂದನ್ನು ಆರಂಭಿಸಲಾಗಿದೆ ಪತ್ರಿಕಾ ಹೇಳಿಕೆಯೊಂದರಲ್ಲಿ ಪಾಕ್ ಸೇನೆ ತಿಳಿಸಿದೆ.
‘‘ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಂಡು ಬರಲು ಪಾಕಿಸ್ತಾನ ಬದ್ಧವಾಗಿದೆ ಹಾಗೂ ಇನ್ನೊಂದು ಬದಿಯಿಂದಲೂ ಅದನ್ನೇ ನಿರೀಕ್ಷಿಸುತ್ತದೆ. ವಿವೇಚನಾಯುತವಾಗಿ ವರ್ತಿಸಲಾಗುತ್ತದೆ ಹಾಗೂ ಪರಿಸ್ಥಿತಿಯನ್ನು ಕದಡುವ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಉಲ್ಲಂಘನೆಗೆ ಕಾರಣವಾಗುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಆಶಿಸಲಾಗಿದೆ’’ ಎಂದು ಹೇಳಿಕೆ ತಿಳಿಸಿದೆ.
Next Story





