ಸಿರಿಯ ಮೇಲೆ ಅಮೆರಿಕ ನಡೆಸಿದ ದಾಳಿ ಅತಿಥಿಗಳಿಗೆ ಮನರಂಜನೆ: ಅಮೆರಿಕದ ವಾಣಿಜ್ಯ ಕಾರ್ಯದರ್ಶಿ

ವಾಶಿಂಗ್ಟನ್, ಮೇ 2: ಎಪ್ರಿಲ್ 6ರಂದು ಸಿರಿಯದ ಮೇಲೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯು, ತನ್ನ ಮಾರ್-ಅ-ಲಾಗೊ ಕ್ಲಬ್‌ನಲ್ಲಿ ಸೇರಿದ್ದ ಅತಿಥಿಗಳಿಗಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏರ್ಪಡಿಸಿದ ರಾತ್ರಿ ಊಟದ ಬಳಿಕದ ಮನರಂಜನೆಯಾಗಿತ್ತು ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಬಣ್ಣಿಸಿದ್ದಾರೆ.
ಕ್ಯಾಲಿಫೋರ್ನಿಯದಲ್ಲಿ ಸೋಮವಾರ ನಡೆದ ಹಣಕಾಸು ಸಮ್ಮೇಳನವೊಂದರಲ್ಲಿ ಮಾತನಾಡಿದ ರಾಸ್, ಫ್ಲೋರಿಡ ಎಸ್ಟೇಟ್‌ನಲ್ಲಿ ಅಂದು ನಡೆದ ಘಟನೆಗಳನ್ನು ಸ್ಮರಿಸಿಕೊಂಡರು. ರಾತ್ರಿಯ ಭೋಜನ ನಡೆಯುತ್ತಿದ್ದ ವೇಳೆ, ಮಧ್ಯ ಪ್ರವೇಶಿಸಿದ ಟ್ರಂಪ್, ಅಮೆರಿಕ ಸಿರಿಯದ ವಾಯುನೆಲೆಯೊಂದರ ಮೇಲೆ ದಾಳಿ ನಡೆಸಿದೆ ಎಂಬುದಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಹೇಳಿದರು ಎಂದರು.
‘‘ಭೋಜನಾನಂತರದ ಮನರಂಜನೆ ಬದಲಿಗೆ ಅದನ್ನು ಏರ್ಪಡಿಸಲಾಗಿತ್ತು’’ ಎಂದು ರಾಸ್ ಹೇಳಿದರು ಎಂದು ‘ವೆರೈಟಿ’ ಪತ್ರಿಕೆ ವರದಿ ಮಾಡಿದೆ.
ರಾಸ್‌ರ ಮಾತುಗಳನ್ನು ಕೇಳಿ ಸಭಿಕರು ನಕ್ಕರು ಎಂದು ಪತ್ರಿಕೆ ಹೇಳಿದೆ. ‘‘ಅಂದು ಮನರಂಜನೆಗಾಗಿ ಅಧ್ಯಕ್ಷರು ಖರ್ಚು ಮಾಡಬೇಕಾದ ಅನಿವಾರ್ಯತೆ ಉಂಟಾಗಲಿಲ್ಲ’’ ಎಂದರು.





