ಬೈಕ್‌ಗೆ ಬಸ್ ಢಿಕ್ಕಿ: ಸವಾರ ಮೃತ್ಯು
ಹೊನ್ನಾವರ, ಮೇ 2: ತಾಲೂಕಿನ ಕೋಟೇಬೈಲ್ ಸಮೀಪದ ತೋಟದಮಕ್ಕಿ ರಸ್ತೆಯ ತಿರುವಿನಲ್ಲಿ ಬೈಕ್‌ಗೆ ಕೆಎಸ್ಸಾರ್ಟಿಸಿ ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬೈಕ್ ಸವಾರ ಹೆರಾವಲಿ ನಿವಾಸಿ ಪ್ರಸನ್ನ ತಿಮ್ಮಣ್ಣ ಭಟ್ಟ (31) ಮೃತಪಟ್ಟ ದುರ್ದೈವಿ. ಈತ ತನ್ನ ಯಮಹಾ ವೈಬಿಆರ್ ಬೈಕನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜನ್ನಕಡಕಲದಿಂದ ಹಡಿನಬಾಳದ ಕಡೆಗೆ ಸಾಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಬಲವಾಗಿ ಗುದ್ದಿದೆ ಎನ್ನಲಾಗಿದೆ. ಇದರಿಂದ ತಲೆ ಮತ್ತು ಮಖಕ್ಕೆ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಸ್ ಚಾಲಕ ಬಸ್ ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





