ಕಾಡಾನೆ ದಾಳಿ: ವ್ಯಕ್ತಿಗೆ ಗಾಯ
ಸುಂಟಿಕೊಪ್ಪ, ಮೇ 2:ಕಂಬಿಬಾಣೆ ತೋಟವೊಂದರಲ್ಲಿ ಕೂಲಿ ಕೆಲಸ ನಿರ್ವಹಿಸಿ ಬರುತ್ತಿದ್ದು ಕಾಡಾನೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ವ್ಯಕ್ತಿಯು ತಲೆ ಕೈ ಕಾಲುಗಳಿಗೆ ಗಾಯಗಳಾಗಿರುವ ಕುರಿತು ವರದಿಯಾಗಿದೆ. ಕಂಬಿಬಾಣೆ ನಿವಾಸಿ ತಮ್ಮಣ್ಣರಾವ್ (55) ಎಂಬವರು ಸ್ಥಳೀಯ ಮುನ್ಸಿಪಾಲ್ ತೋಟದಲ್ಲಿ ಕೂಲಿ ಕೆಲಸ ನಿರ್ವಹಿಸಿ ಮನೆಗೆ ಸಂಜೆ 4 ಗಂಟೆ ಸಂದಭರ್ದಲ್ಲಿ ಆಗಮಿಸುತ್ತಿದ್ದ ವೇಳೆ ಎತ್ತಡ್ಕ ತೋಟದಲ್ಲಿ ಬಿಡುಬಿಟ್ಟಿದ ಮರಿ ಹಾಗೂ ಕಾಡಾನೆಗಳ ಹಿಂಡನ್ನು ಕಾಡಿಗೆ ಹಿಮ್ಮಟ್ಟಿಸಲು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಏಕಾಏಕಿ ನುಗ್ಗಿ ಬಂದ ಕಾಡಾನೆಗಳು ತಮ್ಮಣ್ಣ ಎಂಬವರ ದಾಳಿಗೆ ಪ್ರಯತ್ನಿಸಿದ್ದು, ಇದನ್ನು ಕಂಡ ತಮ್ಮಣ್ಣ ಅವರು ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಕಾಫಿ ತೋಟದೊಳಗೆ ಓಡಿದ ಸಂದರ್ಭದಲ್ಲಿ ಕಾಫಿ ಗಿಡಗಳು ತಗಲಿ ತಲೆ ಭಾಗಕ್ಕೆ ಕೈ, ಕಾಲು ಹಾಗೂ ಸೊಂಟಕ್ಕೆ ತೀವ್ರ ತರಹದ ಗಾಯಗಳಾಗಿದ್ದು, ಅವರನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.





