ಮೂಡುಬಿದಿರೆ: ಸಿಡಿಲು ಬಡಿದು ಬಾಲಕ ಮೃತ್ಯು

ಮೂಡುಬಿದಿರೆ, ಮೇ 2: ಮಳೆ ಸುರಿಯುತ್ತಿದ್ದ ಸಂದರ್ಭ ಮನೆಯ ಹೊರಗಡೆಯಿದ್ದ ಬಾಲಕನೋರ್ವ ಸಿಡಿಲು ಬಡಿದು ಮೃತಪಟ್ಟ ಘಟನೆ ಇಲ್ಲಿನ ಪಣಪಿಲ ಗ್ರಾಮದಲ್ಲಿ ನಡೆದಿದೆ.
ಪಣಪಿಲ ಗ್ರಾಮದ ಬುಳಾಯಿ ನಿವಾಸಿ ಬೊಮ್ಮಣ್ಣ ಪೂಜಾರಿ ಎಂಬವರ ಪುತ್ರ, 8ನೆ ತರಗತಿಯ ವಿದ್ಯಾರ್ಥಿ ಲವಲೇಶ್ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಜೋರಾಗಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭ ಮನೆಯ ಹೊರಗಡೆಯಿದ್ದ ಲವಲೇಶ್ ಗೆ ಸಿಡಿಲು ಬಡಿದಿದ್ದು, ಮೃತಪಟ್ಟಿದ್ದಾನೆ ಎನ್ನಲಾಗಿದೆ.
Next Story





