ಕೇದಾರನಾಥನಿಗೆ ಪ್ರಧಾನಿ ’ನಮೋ’

ಕೇದಾರನಾಥ, ಮೇ 3: ಉತ್ತರಾಖಂಡ್ ನ ಶ್ರೀ ಕೇದಾರನಾಥ ದೇವಾಲಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭೇಟಿ ನೀಡಿದರು.
ಕೇದಾರನಾಥ ದೇವಾಲಯದಲ್ಲಿ ಶ್ರೀಕೇದಾರಿನಾಥೇಶ್ವರನಿಗೆ ಪ್ರಧಾನಿ ಮೋದಿ ವಿಶೇಷ ಪೂಜೆ ಸಲ್ಲಿಸಿದರು. ಧ್ಯಾನ, ರುದ್ರಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡರು.
ಪ್ರಧಾನಿ ಅವರನ್ನು ಇದೇ ಸಂದರ್ಭದಲ್ಲಿ ದೇವಾಲಯದ ಅರ್ಚಕರು ಸನ್ಮಾನಿಸಿದರು. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ದೇವಾಲಯದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
Next Story