ಅಪ್ಪ ನೀಡಿದ ಮದ್ಯ ಸೇವಿಸಿ ಕಾಲುವೆಗೆ ಹಾರಿದ 15ರ ಬಾಲಕ

ಅಡೂರ್,ಮೇ 3: ತಂದೆ ಕೊಟ್ಟ ಮದ್ಯಪಾನ ಮಾಡಿ ಅಮಲೇರಿಸಿಕೊಂಡ ಹದಿನೈದುವರ್ಷದ ಬಾಲಕ ಮನೆಯವರೊಂದಿಗೆ ಜಗಳ ಮಾಡಿ ಕಾಲುವೆಗೆ ಹಾರಿದ್ದಾನೆ. ಅವನನ್ನು ಅಗ್ನಿಶಾಮಕದಳ ಬಂದು ಮೇಲೆತ್ತಿದೆ. ಇದನ್ನೆಲ್ಲ ನೋಡುತ್ತಿದ್ದ ಮತ್ತೊಬ್ಬ ಮದ್ಯಪಾನಿ ವ್ಯಕ್ತಿ ಪೊಲೀಸರ ಎದುರೇ ಈ ಹುಡುಗನಿಗೆ ಮಾರಣಾಂತಿಕವಾಗಿ ಹೊಡೆದಿದ್ದಾನೆ.
ಅಗ ಪೊಲೀಸರುಇವೆಲ್ಲವನ್ನೂ ನೋಡಿ ನಿಂತದ್ದಲ್ಲದೆ ಯಾರವಿರುದ್ಧವೂ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಾತ್ರವಲ್ಲ ಕುಡುಕರ ಜಗಳಕ್ಕೆ ತಾವಿಲ್ಲ ಎನ್ನುವಂತೆ ಅಲ್ಲಿಂದ ಏನೂ ಕ್ರಮಕೈಗೊಳ್ಳದೆ ಮರಳಿ ಹೋಗಿದ್ದಾರೆ.
ಘಟನೆ ರವಿವಾರ ಸಂಜೆ ಐದು ಗಂಟೆಗೆ ಪೆರಿಂಙನಾಡ್ ಚೆನ್ನಂಪಳ್ಳಿ ಎನ್ನುವಲ್ಲಿ ನಡೆದಿದ್ದು, ಸಮೀಪದ ಕಾಲುವೆಗೆ ಮದ್ಯಪಾನಿ ಬಾಲಕ ಹಾರಿದ್ದಾನೆ. ನಂತರ ನೀರಿನ ಹರಿವಿನಲ್ಲಿ ಕೊಚ್ಚಿ ಕೊಂಡು ಹೋಗಿದ್ದ ಆತ ಕಾಲುವೆ ಬದಿಯಲ್ಲಿ ಬೆಳೆದಿದ್ದ ಗಿಡವನ್ನು ಹಿಡಿದು ನಿಂತಿದ್ದಾನೆ. ಅಷ್ಟರಲ್ಲಿ ಸುದ್ದಿ ತಿಳಿದು ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿದ ಹುಡುಗನನ್ನು ಕಾಲುವೆಯಿಂದ ಮೇಲೆತ್ತಿದ್ದಾರೆ. ಜೊತೆಗೆ ಪೊಲೀಸರು ಸ್ಥಳಕ್ಕೆ ತಲುಪಿದರು. ಇದೇ ವೇಳೆ ಇವೆಲ್ಲವನ್ನೂ ನೋಡುತ್ತಿದ್ದ ಇನ್ನೊಬ್ಬ ಮದ್ಯಪಾನಿ ನೀರಿನಿಂದ ಮೇಲೆತಂದ ಬಾಲಕನಿಗೆ ಹೊಡೆದಿದ್ದಾನೆ.
ಅಲ್ಲಿನೆರದಿದ್ದವರನ್ನು ನೋಡಿ ಹುಡುಗ ಅವಾಚ್ಯವಾಗಿ ಬೈದದ್ದು ಇದಕ್ಕೆ ಕಾರಣವಾಗಿತ್ತು. ಬಾಲಕನಿಗೆ ಹೊಡೆಯುತ್ತಾ ಎಸ್ಸೈ ಹತ್ತಿರ ಆತ ಬಾಲಕನನ್ನು ಕರೆದುಕೊಂಡು ಹೋಗಿದ್ದಾನೆ. ಆದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಹೊರಟು ಹೋಗಿದ್ದಾರೆ.ಆತ ಪೊಲೀಸರುಹೋದ ನಂತರವೂ ಹೊಡೆದಿದ್ದು, ಬಾಲಕ ಗಾಯಗೊಂಡಿದ್ದರಿಂದ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ಬಾಲಕನ ತಂದೆ ಬಾಲಕನಿಗೆ ದಿನಾಲೂ ಮದ್ಯ ನೀಡುತ್ತಾನೆ ಎಂದು ಸ್ಥಳೀಯರು ಹೇಳುತ್ತಾರೆ.







