ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂನಿಂದ ಸಿದ್ದರಾಮಯ್ಯರಿಗೆ ಸನ್ಮಾನ

ಅಬುಧಾಬಿ, ಮೇ 3: ಇತ್ತೀಚೆಗೆ ಅಬುಧಾಬಿಗೆ ಭೇಟಿ ನೀಡಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬ್ಯಾರೀಸ್ ವೆಲ್ಫೇರ್ ಫೋರಂ(ಬಿಡಬ್ಲುಎಫ್) ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ ಬಿಡಬ್ಲುಎಫ್ ಪದಾಧಿಕಾರಿಗಳು, ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು. ಅಲ್ಲದೆ, ಹಿಂದುಳಿದವರ, ಬಡವರ ಮತ್ತು ಅನಿವಾಸಿ ಕನ್ನಡಿಗರ ಬಗ್ಗೆ ಕಾಳಜಿ ವಹಿಸುತ್ತಿರುವ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಬಿಡಬ್ಲುಎಫ್ ಕಾರ್ಯವೈಖರಿಯನ್ನು ಅದರಲ್ಲೂ ಸಂಸ್ಥೆಯ ಉಚಿತ ಸಾಮೂಹಿಕ ವಿವಾಹ ಹಾಗೂ ಶೌಚಾಲಯ ಯೋಜನೆಯನ್ನು ಮುಖ್ಯಮಂತ್ರಿ ಶ್ಲಾಘಿಸಿದರು.
ಬಿಡಬ್ಲುಎಫ್ ನಿಯೋಗದಲ್ಲಿ ಮುಹಮ್ಮದಲಿ ಉಚ್ಚಿಲ್, ರಫೀಕ್ ಕೃಷ್ಣಾಫುರ, ಅಬ್ದುಲ್ ರವೂಫ್, ಸಿದ್ದೀಕ್ ಉಚ್ಚಿಲ್, ಇಮ್ರಾನ್ ಅಹ್ಮದ್, ರಶೀದ್ ಬಿಜೈ, ನವಾಝ್ ಉಚ್ಚಿಲ್, ರಶೀದ್ ವಿ.ಕೆ., ಇರ್ಫಾನ್ ಅಹ್ಮದ್ ಉಪಸ್ಥಿತರಿದ್ದರು.
Next Story





