ಎರಡು ವರ್ಷ ವಯಸ್ಸಿಗೇ ದಿನಕ್ಕೆ 40 ಸಿಗರೇಟು ಎಳೆಯುತ್ತಿದ್ದ ಪೋರ ಈಗೇನು ಮಾಡುತ್ತಿದ್ದಾನೆ ಗೊತ್ತೇ ?

ಜಕಾರ್ತ,ಮೇ. 3; ಎರಡನೆ ವರ್ಷ ದಲ್ಲೇ ದಿನಕ್ಕೆ 40ಸಿಗರೇಟು ಸೇದಿದ್ದ ಇಂಡೊನೇಷಿಯನ್ ಬಾಲಕ ಅರ್ದಿ ರಿಸಾಲ್ ಇದೀಗ ಧೂಮಪಾನಸೇವನೆ ಸಂಪೂರ್ಣ ನಿಲ್ಲಿಸಿದ್ದಾನೆ. ಸಮಯಕ್ಕೆ ಸರಿಯಾಗಿ ಸಿಗರೇಟು ಸಿಗದಿದ್ದರೆ ಗಲಾಟೆ ಮಾಡುತ್ತಿದ್ದ ರಿಸಾಲ್ ಈಕೆಟ್ಟ ಅಭ್ಯಾಸದಿಂದಾಗಿ ಜಗತ್ತಿನಾದ್ಯಂತ ಕುಖ್ಯಾತನಾಗಿದ್ದ ಧೂಮಪಾನ ಕಡಿಮೆ ಮಾಡುವುದಕ್ಕಾಗಿ ಇಂಡೊನೇಶ್ಯ ಸರಕಾರ ಆತನನ್ನು ಧೂಮಪಾನ ವರ್ಜನಾ ಕೇಂದ್ರಕ್ಕೆ ಸೇರಿಸಿದ್ದರಿಂದ ಅರ್ದಿ ರಿಸಾಲ್ ಈ ಕೆಟ್ಟ ಅಭ್ಯಾಸವನ್ನು ತೊರೆದಿದ್ದಾನೆ.ಆದರೆ, ನಂತರ ಆತ ಹೆಚ್ಚು ಆಹಾರ ಸೇವಿಸಲಾರಂಭಿಸಿದ್ದರಿಂದ ದೇಹದಲ್ಲಿ ಬೊಜ್ಜು ಬೆಳೆದಿತ್ತು. ಆದರೆ ಈಗ ಅರ್ದಿರಿಸಾಲ್ ಭಿನ್ನವಾಗಿದ್ದಾನೆ.
ಸದ್ಯ ರಿಸಾಲನಿಗೆ ಒಂಬತ್ತುವರ್ಷ ವಯಸ್ಸಾಗಿದ್ದು, ಶಾಲೆಗೆ ಹೋಗತೊಡಗಿದ್ದಾನೆ. ಇತರ ಮಕ್ಕಳೊಂದಿಗೆ ಶಾಲೆಯಲ್ಲಿ ಆನಂದಿಸುತ್ತಿರುವ ಆತ ತಾನು ಧೂಮಪಾನ ಮಾಡುತ್ತಿದ್ದ ಹಳೆಯ ಫೋಟೊಗಳನ್ನು ನೋಡಿ ಆಶ್ಚರ್ಯಗೊಳ್ಳುತ್ತಾನೆ.
ತಾನು ಹೀಗೆ ಇದ್ದೆಎನ್ನುವುದನ್ನು ಅವನಿಂದ ಯೋಚಿಸಲು ಕೂಡಾ ಈಗ ಸಾಧ್ಯವಾಗುತ್ತಿಲ್ಲ. ನಾಲ್ಕನೆಕ್ಲಾಸಿಗೆ ತೇರ್ಗಡೆಯಾಗುವುದು ತನ್ನ ಉದ್ದೇಶ ಎಂದು ಅರ್ದಿ ರಿಸಾಲ್ ಹೇಳುತ್ತಿದ್ದಾನೆ. ಹಿಂದೆ ಒಂದು ಕೈಯಲ್ಲಿ ಹಾಲಿನ ಬಾಟ್ಲಿ ಇನ್ನೊಂದು ಕೈಯಲ್ಲಿ ಸಿಗರೇಟು ಇಟ್ಟುಕೊಂಡು ರಿಸಾಲ್ ಬದುಕಿದ್ದ.







