ಭ್ರಷ್ಟಾಚಾರದ ಆರೋಪದಲ್ಲಿ ಮುಂಬೈನ ಆದಾಯ ತೆರಿಗೆ ಆಯುಕ್ತ ಸೆರೆ

ಹೊಸದಿಲ್ಲಿ,ಮೇ 3: ಪ್ರಮುಖ ಕಾರ್ಪೊರೇಟ್ ಸಮೂಹವೊಂದರಿಂದ 19 ಕೋ.ರೂ.ಲಂಚ ಸ್ವೀಕಾರದ ಆರೋಪದಲ್ಲಿ ಮುಂಬೈನ ಆದಾಯ ತೆರಿಗೆ ಆಯುಕ್ತ ಬಿ.ಬಿ.ರಾಜೇಂದ್ರ ಪ್ರಸಾದ್ ಮತ್ತು ಇತರ ಐವರನ್ನು ಸಿಬಿಐ ಬಂಧಿಸಿದೆ.
ಪ್ರಸಾದ್ ಮತ್ತು ಇನ್ನೋರ್ವ ವ್ಯಕ್ತಿಯನ್ನು ವಿಶಾಖಪಟ್ಟಣಂನಲ್ಲಿ ಮತ್ತು ಇತರ ನಾಲ್ವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿದವು.
ಶೋಧ ಕಾರ್ಯಾಚರಣೆ ವೇಳೆ 1.5 ಕೋ.ರೂ.ನಗದು ಪತ್ತೆಯಾಗಿದ್ದು, ಅದನ್ನು ವಶ ಪಡಿಸಿಕೊಳ್ಳಲಾಗಿದೆ.
Next Story





