ಎಎಪಿ ಎರಡು ಹೋಳಾಗಲಿದೆಯೇ?: ಪಕ್ಷದೊಳಗೆ ಒಗ್ಗಟ್ಟು ಉಳಿಸಿಕೊಳ್ಳಲು ಕೇಜ್ರಿಯಿಂದ ಕಸರತ್ತು

ಹೊಸದಿಲ್ಲಿ,ಮೇ 3: ಆಮ್ ಆದ್ಮಿಪಾರ್ಟಿಯಲ್ಲಿ ಭಿನ್ನಮತೀಯ ಚಟುವಟಿಕೆ ತೀವ್ರಗೊಂಡಿದ್ದು, ಎಎಪಿಯ ಹಿರಿಯ ನಾಯಕ ಕುಮಾರ್ ವಿಶ್ವಾಸ್‌ರ ಹೇಳಿಕೆಯನ್ನು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಟೀಕಿಸಿದ್ದಾರೆ. ಪಕ್ಷದೊಳಗಿನ ಘರ್ಷಣೆ ತಾರಕ್ಕೇರುತ್ತಿದ್ದಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ರಾಜಿಯತ್ನ ನಡೆಯುತ್ತಿದೆ.
ಓಕ್ಲ ಶಾಸಕ ಅಮಾನತುಲ್ಲ ಖಾನ್ ಅವರ ಕುಮಾರ್‌ವಿಶ್ವಾಸ್‌ರ ವಿರುದ್ಧ ನೀಡಿದ್ದ ಹೇಳಿಕೆ ಪಕ್ಷದಲ್ಲಿ ಘರ್ಷಣೆಯ ವಾತಾವರಣವನ್ನು ಸೃಷ್ಟಿಸಿದೆ. ಎಎಪಿಯನ್ನು ಇಬ್ಭಾಗ ಮಾಡಿ ಬಿಜೆಪಿಗೆ ಸೇರಲು ಕುಮಾರ್ ವಿಶ್ವಾಸ್ ಯತ್ನಿಸುತ್ತಿದ್ದಾರೆ ಎಂದು ಅಮಾನತುಲ್ಲ ಖಾನ್ ಆರೋಪಿಸಿದ್ದರು. ಬಿಜೆಪಿ ಅವರಿಗೆ 30 ಕೋಟಿ ರೂಪಾಯಿ ವಾಗ್ದಾನ ನೀಡಿದೆ. ಆದ್ದರಿಂದ ಕುಮಾರ್ ವಿಶ್ವಾಸ್ ಪಕ್ಷವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಖಾನ್ ಗಂಭೀರ ಆರೋಪ ಹೊರಿಸಿದ್ದಾರೆ.
ಅಮಾನತುಲ್ಲ ಖಾನ್‌ರ ಹೇಳಿಕೆ ಪಕ್ಷದಲ್ಲಿ ಹೊಸ ಸಂಘರ್ಷಕ್ಕೆ ಕಾರನವಾಗಿದೆ. ವಿಶ್ವಾಸ್ ಬಿಜೆಪಿಗಾಗಿ ಕೆಲಸಮಾಡುತ್ತಿದ್ದಾರೆ ಎನ್ನುವ ಮೂಲಕ ವಿರೋಧದ ಕಿಡಿಹಚ್ಚಿದ್ದಾರೆ. ಖಾನ್ ವಿರುದ್ಧ ಪ್ರತಿಕ್ರಿಯೆ ನೀಡಿರುವ ವಿಶ್ವಾಸ್‌ಎಎಪಿನಾಯಕರುತನ್ನ ವಿರುದ್ಧ ಸಂಚುನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಅಮಾನತ್ತುಲ್ಲ ಖಾನ್ ಒಂದುವೇಳೆ ಸಿಸೋಡಿಯ ಅಥವಾ ಕೇಜ್ರಿವಾಲ್ ವಿರುದ್ಧ ಆರೋಪ ಮಾಡಿದ್ದರೆ ಈಗ ಅವರು ಪಕ್ಷದಲ್ಲೇ ಇರುತ್ತಿರಲಿಲ್ಲ. ತನ್ನ ವಿರುದ್ಧ ಹಲವರು ನಡೆಸುತ್ತಿರುವ ಸಂಚು ಖಾನ್‌ರ ಮೂಲಕ ಬಹಿರಂಗವಾಗಿದೆ ಎಂದಿದ್ದಾರೆ.
ಅಮಾನತುಲ್ಲ ಖಾನ್ ಆರೋಪದ ವಿರುದ್ಧ ಪಕ್ಷ ನಾಯಕರ ಒಂದು ವಿಭಾಗ ಪ್ರತಿಕ್ರಿಯಿಸಿ ರಂಗಪ್ರವೇಶಿಸುವುದರೊಂದಿಗೆ ಎಎಪಿ ಕುದಿಯುವ ತೈಲದಂತಾಗಿದೆ. ಪಂಜಾಬ್, ದಿಲ್ಲಿಯ 35ರಷ್ಟು ಶಾಸಕರು ಅಮಾನತ್ತುಲ್ಲ ಖಾನ್ ವಿರುದ್ಧ ಕ್ರಮಜರಗಿಸಬೇಕೆಂದು ಗುರುವಾರ ನಡೆದ ಎಎಪಿ ರಾಜಕೀಯ ವಿಷಯಗಳಸಮಿತಿಯಲ್ಲಿ ಹೇಳಿದ್ದಾರೆ. ನಂತರ ಈ ಸಮಿತಿಗೆ ಅಮಾನತ್ತುಲ್ಲ ಖಾನ್ ರಾಜೀನಾಮೆ ನೀಡಿದರು.
ಅದೇವೇಳೆ, ಕುಮಾರ್ ವಿಶ್ವಾಸ್ ಪಕ್ಷದೊಳಗಿನ ಭಿನ್ನಮತವನ್ನು ಮಧ್ಯಮಗಳಿಗೆ ಬಹಿರಂಗಪಡಿಸಿದ್ದನ್ನು ಹಿರಿಯ ಎಎಪಿ ನಾಯಕ ಸಿಸೋಡಿಯ ಖಂಡಿಸಿದ್ದಾರೆ. ಇಂತಹ ಹೇಳಿಕೆಗಳು ಪಕ್ಷದಕಾರ್ಯಕರ್ತರ ವಿಶ್ವಾಸವನ್ನು ಕುಂದುವಂತೆಮಾಡುತ್ತದೆ. ಭಿನ್ನಾಭಿಪ್ರಾಯಗಳನ್ನು ಪಕ್ಷದೊಳಗೆ ಚರ್ಚಿಸಬೇಕು ಎಂದು ಸಿಸೋಡಿಯ ಹೇಳಿದ್ದಾರೆ. ಇದೇ ವೇಳೆ ಕುಮಾರ್ ವಿಶ್ವಾಸ್‌ಗೂ ರಾಷ್ಟೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್‌ರಿಗೂ ಸಂಬಂಧವಿದೆಎಂದು ಆಮ್ ಆದ್ಮಿ ಯುವ ವಿಭಾಗ ನಾಯಕಿ ವಂದನಾ ಸಿಂಗ್ ಆರೋಪಿಸಿದರು.
ದಿಲ್ಲಿ ಮುನ್ಸಿಪಲ್ ವಾರ್ಡ್‌ಗಳ ಚುನಾವಣೆಯಲ್ಲಿ ಆಮ್‌ಆದ್ಮಿ ಪಾರ್ಟಿ ಹೀನಾಯವಾಗಿ ಸೋಲುಂಡಿತ್ತು. ಅದಕ್ಕಿಂತ ಮೊದಲು ರಜೌರಿ ಗಾರ್ಡನ್ ಉಪಚುನಾವಣೆಯಲ್ಲಿ ರೇವಣಿ ಕಳಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಕಲಹ ಏರ್ಪಟ್ಟಿದೆ. ಪಕ್ಷ ಹೊಳಾಗುವ ಸಾಧ್ಯತೆ ಎದುರಾಗಿದೆ. ಪಕ್ಷದ ನಾಯಕರು ಬೇರೆ ಬೇರೆ ಗುಂಪು ಮಾಡಿಕೊಂಡಿದ್ದಾರೆ. ನಾಯಕರನ್ನು ಸಂತೈಸಿ ಪಕ್ಷವನ್ನು ಒಡೆಯದಂತೆ ನೋಡಿಕೊಳ್ಳಲು ಅರವಿಂದ್ ಕೇಜ್ರಿವಾಲ್ ಪ್ರಯತ್ನಿಸುತ್ತಿದ್ದಾರೆ.
ಮಂಗಳವಾರ ರಾತ್ರೆ ಮನಿಷ್ ಸಿಸೋಸಿಡಿಯ ಮತ್ತುಕೇಜ್ರಿವಾಲ್ ಕುಮಾರ್ ವಿಶ್ವಾಸ್‌ರ ಮನೆಗೆ ಭೇಟಿ ನೀಡಿ ಚರ್ಚಿಸಿದ್ದಾರೆ. ಸಚಿವರಾದ ಕಪಿಲ್ ಮಿಶ್ರ, ಇಮ್ರಾನ್ ಹುಸೈನ್ ಚರ್ಚೆಯಲ್ಲಿ ಜೊತೆಗಿದ್ದರು. ಬುಧವಾರ ಹನ್ನೊಂದು ಗಂಟೆಗೆ ಎಎಪಿಯ ರಾಜಕೀಯ ವಿಷಯ ಸಮಿತಿ ಸಭೆ ಸೇರಲಿದೆ. ಈ ಸಭೆಯಲ್ಲಿ ಕುಮಾರ್‌ವಿಶ್ವಾಸ್‌ರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಯಬಹುದು. ಮತ್ತು ಈಗ ತಲೆದೋರಿರುವ ಸಮಸ್ಯೆ ಬಗೆಹರಿಯಬಹುದು ಎಂದು ಹೇಳಲಾಗುತ್ತಿದೆ.