ಗೋಕರ್ಣ: ಸಮುದ್ರಪಾಲಾಗುತ್ತಿದ್ದ ವಿದೇಶಿ ಮಹಿಳೆಯ ರಕ್ಷಣೆ

ಗೋಕರ್ಣ, ಮೇ 3: ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ನೀರುಪಾಲಾಗುತ್ತಿದ್ದ ಫ್ರಾನ್ಸ್ ಮಹಿಳೆಯೋರ್ವರನ್ನು ಇಲ್ಲಿನ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
ಮೂರು ದಿನಗಳ ಹಿಂದೆ ತನ್ನ ಗೆಳತಿಯೊಂದಿಗೆ ಗೋಕರ್ಣಕ್ಕೆ ಆಗಮಿಸಿದ್ದ ಡೆಬ ಮರಿಯಾನ್ ಎಂಬ ಫ್ರಾನ್ಸ್ ನ ಮಹಿಳೆ ಇಂದು ಕುಡ್ಲೆ ಬೀಚ್ ನಲ್ಲಿ ನೀರಿಗಿಳಿದಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿ ಬಹುತೇಕ ನೀರುಪಾಲಾಗಿ ಸುಮಾರು 200 ಮೀ.ನಷ್ಟು ದೂರ ಕೊಚ್ಚಿ ಹೋಗಿದ್ದಳು. ಈ ಸಂದರ್ಭ ಅವರ ಗೆಳತಿಯರು ಬೊಬ್ಬಿಟ್ಟಿದ್ದು, ತಕ್ಷಣ ರಕ್ಷಣೆಗೆ ಧಾವಿಸಿದ ಜಿಲ್ಲಾಡಳಿತ ನೇಮಕ ಮಾಡಿರುವ ತರಬೇತು ಹೊಂದಿರುವ ಜೀವರಕ್ಷಕ ಸಿಬ್ಬಂದಿ ಮಹೇಶ ಹರಿಕಂತ್ರ ಡೆಬ ಮರಿಯಾನ್ ರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
Next Story





