ಜೆಪ್ಪು: 7ನೆ ಮಹಡಿಯಿಂದ ಬಿದ್ದು ಮಗು ಮೃತ್ಯು
ಮಂಗಳೂರು, ಮೇ 3: ಒಂದೂವರೆ ವರ್ಷದ ಮಗುವೊಂದು ಕಟ್ಟಡದ 7ನೆ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ಜೆಪ್ಪುವಿನಲ್ಲಿ ನಡೆದಿದೆ.
ಇಮ್ರಾನ್ ಹುಸೇನ್ ಎಂಬವರ ಪುತ್ರ ಮುಹಮ್ಮದ್ ಶಾನ್ (1.5 ವರ್ಷ) ಮೃತಪಟ್ಟ ಮಗು.
ಜೆಪ್ಪುವಿನಲ್ಲಿರುವ ವಸತಿ ಸಮುಚ್ಚಯದ ಏಳನೆ ಅಂತಸ್ತಿನ ಫ್ಲ್ಯಾಟ್‌ವೊಂದರಲ್ಲಿ ಇಮ್ರಾನ್ ದಂಪತಿ ವಾಸವಾಗಿದ್ದು, ಇಂದು ಸಂಜೆ ಸುಮಾರು 4 ಗಂಟೆ ಹೊತ್ತಿಗೆ ಮಗು ಫ್ಲ್ಯಾಟ್‌ನ ಗ್ಲಾಲರಿ ಕಡೆಗೆ ಕುರ್ಚಿ ತಂದು ನಿಂತಿದ್ದಂತೆಯೇ ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ. ಈ ಸಂದರ್ಭದಲ್ಲಿ ಮಗುವಿನ ತಾಯಿ ಒಳಗಿದ್ದು, ಈ ದುರ್ಘಟನೆ ಅವರ ಗಮನಕ್ಕೆ ಬಂದಿರಲಿಲ್ಲ.
ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ. ಮಗುವಿನ ತಂದೆ ವಿದೇಶದಲ್ಲಿದ್ದು, ಅವರು ಗುರುವಾರ ಜೆಪ್ಪುವಿಗೆ ಮರಳಲಿದ್ದು, ಬಳಿಕ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
Next Story





