ಸ್ಕೂಬಾ ಡೈವ್ ನಲ್ಲಿ ಗಿನ್ನೆಸ್ ದಾಖಲೆ ಬರೆದ ಆಯಿಷಾ ಹಿಬಾಗೆ ಸನ್ಮಾನ

ಮಂಗಳೂರು, ಮೇ 3: ಸ್ಕೂಬಾ ಡೈವ್ ನಲ್ಲಿ ಗಿನ್ನೆಸ್ ದಾಖಲೆ ಬರೆದ ತಂಡದ ಸದಸ್ಯೆ ಆಯಿಷಾ ಹಿಬಾರನ್ನು ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಕಳದ ಅಬ್ದುಲ್ ಹಮೀದ್ ಮತ್ತು ಆರಿಫಾ ದಂಪತಿಯ ಪುತ್ರಿಯಾದ ಆಯಿಷಾ ಹಿಬಾ ತನ್ನ ತಂದೆಯ ಜೊತೆ ಸ್ಕೂಬಾ ಡೈವ್ ನಲ್ಲಿ ಪಾಲ್ಗೊಂಡು ದಾಖಲೆ ಬರೆದಿದ್ದರು.
ಈ ಸಂದರ್ಭ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎ ಮುಹಮ್ಮದ್ ಹನೀಫ್, ರಿಜಿಸ್ಟ್ರಾರ್ ಉಮರಬ್ಬ, ಅಖಿಲ ಭಾರತ ಬ್ಯಾರಿ ಪರಿಷತ್ತಿನ ಗೌರವಾಧ್ಯಕ್ಷರಾದ ಸೂರಲ್ಪಾಡಿ ಅಬ್ದುಲ್ ಮಜೀದ್, ಕೆ.ಎಂ.ಸಿ.ಸಿ ಕರ್ನಾಟಕ ಇದರ ಕಾರ್ಯದರ್ಶಿ ಅಮೀರುದ್ದೀನ್ ಬಜ್ಪೆ ಉಪಸ್ಥಿತರಿದ್ದರು.
Next Story





