ಇರಾನ್: ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ; ಹಲವರ ಸಾವು

ಟೆಹರಾನ್, ಮೇ 3: ಉತ್ತರ ಇರಾನ್‌ನ ಕಲ್ಲಿದ್ದಲು ಗಣಿಯೊಂದರಲ್ಲಿ ಬುಧವಾರ ಭಾರೀ ಸ್ಫೋಟವೊಂದು ಸಂಭವಿಸಿದ ಬಳಿಕ 50ಕ್ಕೂ ಅಧಿಕ ಕಾರ್ಮಿಕರು ಸಿಕಿಹಾಕಿಕೊಂಡಿದ್ದಾರೆ ಹಾಗೂ ಅವರ ಪೈಕಿ ಕೆಲವರು ಮೃತಪಟ್ಟಿದ್ದಾರೆ ಎಂದು ಭೀತಿಪಡಲಾಗಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.
ಗೋಲೆಸ್ತಾನ್ ರಾಜ್ಯದ ಝೆಮಸ್ಟಾನ್‌ಯುರ್ಟ್ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿದ ಬಳಿಕ ಡಝನ್‌ಗೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ತಿಳಿಸಿದೆ.
Next Story





