ಜೋಕಾಲಿ ಕಟ್ಟಿದ ಸೀರೆ ಸುತ್ತಿ ಬಾಲಕಿ ಮೃತ್ಯು
ಕಾಪು, ಮೇ 3: ಜೋಕಾಲಿ ಸೀರೆ ಕುತ್ತಿಗೆಗೆ ಸುತ್ತಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕಟಪಾಡಿ ಏಣ ಗುಡ್ಡೆ ಎಂಬಲ್ಲಿ ನಡೆದಿದೆ.
ಏಣಗುಡ್ಡೆಯ ಶ್ರೀಧರ ಆಚಾರ್ಯ ಎಂಬವರ ಮಗಳು ಅಭಿಜ್ಞಾ(10) ಮೃತ ಬಾಲಕಿ. ಈಕೆ ಮನೆಯ ರೂಮಿನಲ್ಲಿ ಸೀರೆಯನ್ನು ಕಟ್ಟಿ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಸೀರೆ ಕುತ್ತಿಗೆ ಸುತ್ತಿ ಉಸಿರುಗಟ್ಟಿ ಮೃತಪಟ್ಟಳು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story