ಸಿರಿಯ: ನಿರಾಶ್ರಿತ ಶಿಬಿರದ ಮೇಲೆ ದಾಳಿ; 32 ಸಾವು

ಬೆರೂತ್, ಮೇ 3: ಇರಾಕ್ ಗಡಿಗೆ ಸಮೀಪವಿರುವ ಸಿರಿಯದ ನಿರಾಶ್ರಿತ ಶಿಬಿರವೊಂದರ ಮೇಲೆ ಮಂಗಳವಾರ ದಾಳಿ ನಡೆಸಿದ ಆತ್ಯಹತ್ಯಾ ಬಾಂಬರ್‌ಗಳು ಕನಿಷ್ಠ 32 ಮಂದಿಯನ್ನು ಹತ್ಯೆಮಾಡಿದ್ದಾರೆ.
‘‘ಹಸಕೇಹ್ ಪ್ರಾಂತದಲ್ಲಿ ಇರಾಕ್ ಮತ್ತು ಸಿರಿಯ ನಿರಾಶ್ರಿತರಿಗಾಗಿ ಸ್ಥಾಪಿಸಲಾಗಿರುವ ಶಿಬಿರವೊಂದರ ಹೊರಗೆ ಮತ್ತು ಒಳಗೆ ಕನಿಷ್ಠ ಐವರು ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡರು’’ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರಹಮಾನ್ ತಿಳಿಸಿದರು.
Next Story





