ಉಳ್ಳಾಲ ಕಡಲ್ಕೊರೆತ: ವರದಿ ಸಲ್ಲಿಸಲು ಅಧಿಕಾರಿಗಳಿಗೆ ಖಾದರ್ ಸೂಚನೆ
ಕಿಲರಿಯಾ ನಗರ, ಕೈಕೋದಲ್ಲಿ ಹೆಚ್ಚುವರಿ ಬರ್ಮ್ ನಿರ್ಮಾಣಕ್ಕೆ ಕ್ರಮ

ಮಂಗಳೂರು, ಮೇ 3: ಉಳ್ಳಾಲ ಪ್ರದೇಶ ವ್ಯಾಪ್ತಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುತ್ತಿರುವ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಡಲ್ಕೊರೆತ ಸಂಭವಿಸುವ ಪ್ರದೇಶಗಳಿಗೆ ಭೇಟಿ ನೀಡಿ, ವೀಕ್ಷಣೆ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ತಹಶೀಲ್ದಾರ್ ಸಹಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರತಿ ಮಳೆಗಾಲದ ಸಂದರ್ಭದಲ್ಲೂ ಉಳ್ಳಾಲ, ಕೋಟೆಪುರ, ಕೈಕೊ, ಕಿಲರಿಯನಗರ, ಸೋಮೇಶ್ವರ ಉಚ್ಚಿಲ ಮೊದಲಾದ ಪ್ರದೇಶಗಳಲ್ಲಿ ಕಡಲ್ಕೊರೆತ ಸಂಭವಿಸುತ್ತಿದೆ. ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ, ವೀಕ್ಷಣೆ ನಡೆಸಿ ಮಳೆಗಾಲ ಮುಂಚಿತವಾಗಿ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಬರ್ಮ್ ನಿರ್ಮಾಣಕ್ಕೆ ಕ್ರಮ
ಕಡಲ್ಕೊರೆತ ತಡೆಗಟ್ಟಲು ಕಿಲರಿಯಾನಗರ, ಕೈಕೊಗಳಲ್ಲಿ ಹೆಚ್ಚುವರಿ ಬರ್ಮ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
Next Story





