ದಾದಾಸಾಹೇಭ್ ಫಾಲ್ಕೆ, 64ನೆ ಚಲನಚಿತ್ರ ಪ್ರಶಸ್ತಿ ಪ್ರದಾನ..!
ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಖ್ಯಾತ ಸಿನೆಮಾ ನಿರ್ದೇಶಕ ಮತ್ತು ನಟ ಕೆ.ವಿಶ್ವನಾಥ್ ಅವರಿಗೆ 2016ರ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹಾಗೂ 64ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನಿಸಿದರು. ‘ರುಸ್ತುಂ’ ಚಿತ್ರದ ನಟನೆಗಾಗಿ ಬಾಲಿವುಡ್‌ನ ಅಕ್ಷಯ್ ಕುಮಾರ್ ಅತ್ಯುತ್ತಮ ನಟ ಮತ್ತು ಮಲಯಾಳಂ ನಟಿ ಸುರಭಿ ಲಕ್ಷ್ಮೀ ಅವರು ‘ಮಿನ್ನಮಿನುಂಗು’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೋನಂ ಕಪೂರ್ ನಟಿಸಿರುವ, ರಾಮ ಮಾಧ್ವಾನಿ ನಿರ್ದೇಶನದ ‘ನೀರ್ಜಾ’ ಅತ್ಯುತ್ತಮ ಹಿಂದಿ ಕಥಾಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್‌ಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ.
Next Story





