ತಿರುವನಂತಪುರಂ,ಮೇ 4: ಕೇರಳದ 10ನೇ ತರಗತಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟಗೊಳ್ಳಲಿದೆ. ಮಧ್ಯಾಹ್ನ ಎರಡು ಗಂಟೆಗೆ ಪಿ.ಆರ್. ಚೇಂಬರ್‌ನಲ್ಲಿವಿದ್ಯಾಭ್ಯಾಸ ಸಚಿವಸಿ. ರವೀಂದ್ರನಾಥ್ ಫಲಿತಾಂಶ ಘೋಷಿಸಲಿದ್ದಾರೆ. ಪರೀಕ್ಷೆಯ ಫಲಿತಾಂಶಕ್ಕೆಅಂತಿಮ ಒಪ್ಪಿಗೆ ನೀಡಲು ಪರೀಕ್ಷಾ ಪಾಸು ಮಂಡಲಿ ಗುರುವಾರ ಸಂಜೆ ನಾಲ್ಕು ಗಂಟೆಗೆ ಸಭೆ ಸೇರಲಿದೆ. ಈ ಸಲವೂ ಮಾಡರೇಶನ್ ಮಾರ್ಕ್‌ಗಳು ನೀಡಲಾಗಿಲ್ಲ.
ವೆಬ್‌ಸೈಟ್ ಮೂಲಕ ಫಲಿತಾಂಶವನ್ನು ತಿಳಿಯಲು ಐಟಿ@ಸ್ಕೂಲ್ ವ್ಯವಸ್ಥೆ ಮಾಡಲಾಗಿದೆ. ಸಫಲಂ 2017 ಎನ್ನುವ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ತಿಳಿದುಕೊಳ್ಳಲು ಅವಕಾಶ ಇದೆ. ಸ್ಕೂಲ್ ವಿದ್ಯಾಭ್ಯಾಸ ಜಿಲ್ಲಾ ರೆವೆನ್ಯೂ ಜಿಲ್ಲಾ ಮಟ್ಟದ ಫಲಿತಾಂಶದ ಅವಲೋಕನ, ವಿಷಯಾಧಾರಿತ ಅವಲೋಕನಗಳು, ವರದಿಗಳು ಪೋರ್ಟಲ್‌ನಲ್ಲಿ ಮತ್ತುಮೊಬೈಲ್ ಆ್ಯಪ್‌ಗಳಲ್ಲಿ ಲಭಿಸಲಿದೆ. ಗೂಗಲ್ ಪ್ಲೆ ಸ್ಟೋರ್‌ನಿಂದ Saphalam 2017 ಎಂದು ಬರೆದು ಆ್ಯಪ್ ಡೌನ್‌ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ವ್ಯವಸ್ಥೆ ಲಭ್ಯಗೊಳಿಸಿದ ಒಂಬತ್ತು ಸಾವಿರ ಎಲ್‌ಪಿ, ಯುಪಿ ಸ್ಕೂಲ್‌ಗಳಿಗೂ ಫಲಿತಾಂಶ ಅರಿಯಲು ವ್ಯವಸ್ಥೆ ಮಾಡಲಾಗಿದೆಎಂದು ಐಟಿ@ಸ್ಕೂಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆ. ಅನ್ವರ್ ಸಾದಾತ್ ತಿಳಿಸಿದ್ದಾರೆ. ಪರೀಕ್ಷಾ ಭವನದ ವೆಬ್‌ಸೈಟ್ ನಿಂದಲೂ ಫಲಿತಾಂಶ ಅರಿತುಕೊಳ್ಳಬಹುದಾಗಿದೆ.