2005ರಿಂದ 2014ರವರೆಗೆ ಭಾರತಕ್ಕೆ ಬಂದಿರುವ ಕಪ್ಪು ಹಣ ಎಷ್ಟು ಲಕ್ಷ ಕೋಟಿ ಗೊತ್ತೇ ?

ಹೊಸದಿಲ್ಲಿ,ಮೇ4: 2005ರಿಂದ 2014ರ ನಡುವೆ ಭಾರತಕ್ಕೆ 49 ಲಕ್ಷ ಕೋಟಿ ರೂಪಾಯಿ ಕಪ್ಪುಹಣ ಹರಿದು ಬಂದಿದೆ ಎಂದು ಅಮೆರಿಕದ ಗ್ಲೋಬಲ್ ಫೈನಾನ್ಷಿಯಲ್ ಇಂಟಗ್ರಿಟಿ(ಜಿಎಫ್‌ಐ) ವರದಿಮಾಡಿದೆ. ಈ ಅವಧಿಯಲ್ಲಿ ಭಾರತದಿಂದ 10.58 ಲಕ್ಷ ಕೋಟಿ ರೂಪಾಯಿ ಮಾತ್ರ ಹೊರಗೆ ಹೋಗಿದೆ. ಇದು ಕೂಡಾ ಕಪ್ಪು ಹಣ ಎಂದು ವರದಿಯಲ್ಲಿ ಜಿಎಫ್‌ಐ ವಿವರಿಸಿದೆ. 2014ರಲ್ಲಿ 6.47ಲಕ್ಷ ಕೋಟಿರೂಪಾಯಿ ಕಪ್ಪುಹಣ ಭಾರತಕ್ಕೆ ಹರಿದು ಬಂತು ಎನ್ನಲಾಗಿದೆ.
1.47 ಲಕ್ಷಕೋಟಿರೂಪಾಯಿ ಕಪ್ಪುಹಣ ಈ ಅವಧಿಯಲ್ಲಿ ಭಾರತದಿಂದ ಹೊರಗೆ ಹೋಗಿದೆ. 2005-2014ರ ಮಧ್ಯೆ ಅಭಿವೃದ್ಧಿ ಶೀಲ ದೇಶಗಳಿಂದ ಒಳಗೆ ಮತ್ತು ಹೊರಗೆ ನಡೆದಿರುವ ಹಣದ ಹರಿವಿನ ಕುರಿತುಲೆಕ್ಕವನ್ನು ಸೋಮವಾರ ಜಿಎಫ್‌ಐ ಹೊರಹಾಕಿದೆ. ದೇಶ ಮತ್ತು ದೇಶಗಳಿಂದ ಹೊರಗೆ ಹೋದ ಹಣ ಲೆಕ್ಕಹಾಕಿದ ಪ್ರಪ್ರಥಮ ಅಧ್ಯಯನ ವರದಿ ಇದು ಎನ್ನಲಾಗಿದೆ.
ದೇಶದೊಳಗೆ ಬರುವ ಮತ್ತು ದೇಶದಿಂದ ಹೊರಗೆ ಹೋಗುವ ಕಪ್ಪುಹಣದ ಬಗ್ಗೆ ದೇಶದಲ್ಲಿ ಅಧಿಕೃತವಾದ ಲೆಕ್ಕ ವಿಲ್ಲದ್ದರಿಂದ ವರದಿ ಮಹತ್ವವನ್ನು ಪಡೆದುಕೊಂಡಿದೆ. ಭಾರತದ ಒಟ್ಟು ವ್ಯಾಪಾರದ ಶೇ. 14ರಷ್ಟು ಹಣವು ಅನಧಿಕೃತವಾಗಿ ಹರಿದಿದೆ ಎಂದು ಜಿಎಫ್ ಐ ಲೆಕ್ಕ ತಿಳಿಸಿದೆ.





