ಅಲ್ ಬದ್ರಿಯಾ ವಿದ್ಯಾ ಟ್ರಸ್ಟ್‌ನಿಂದ ಉಚಿತ ಸುನ್ನತ್ ಕಾರ್ಯಕ್ರಮ

ಮೂಡುಬಿದಿರೆ, ಮೇ 4: ಇಲ್ಲಿನ ವಿಶಾಲ ನಗರದ ಅಲ್ ಬದ್ರಿಯಾ ವಿದ್ಯಾ ಟ್ರಸ್ಟ್ ವತಿಯಿಂದ ಉಚಿತ ಮುಂಜಿ(ಸುನ್ನತ್) ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು. ಸುಮಾರು 51 ಮಕ್ಕಳು ಇದರ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಬಶೀರ್ ವಹಿಸಿದ್ದರು. ಲಾಡಿ ಮಸೀದಿಯ ಖತೀಬ್ ಹಕೀಂ ಮದನಿ ದುಆ ನೆರವೇರಿಸಿಕೊಟ್ಟರು. ಮಕ್ಕಳ ಸುನ್ನತ್ ಕಾರ್ಯಕ್ರಮವನ್ನು ಡಾ ರಹ್ಮತುಲಾ ನಿರ್ವಹಿಸಿದರು.
ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಜುಮಾ ಮಸೀದಿಯ ಉಪಾಧ್ಯಕ್ಷ ಅಬೂಬಕರ್, ಪಾರ್ಕರ್ ಅಯಾಝ್, ಮಾಲಿಕ್ ಹಸನಬ್ಬ ಮತ್ತಿತರರು ಉಪಸ್ಥಿತರಿದ್ದರು.
Next Story





