ಅರ್ಜುನ ಪ್ರಶಸ್ತಿಗೆ ಸವೀಟಿ, ಸೋನಿಯಾ, ಸರ್ಜುಬಾಲಾ ಹೆಸರು ಶಿಫಾರಸು

ಹೊಸದಿಲ್ಲಿ, ಮೇ 4: ಭಾರತದ ಬಾಕ್ಸಿಂಗ್ ಫೆಡರೇಶನ್(ಬಿಎಫ್‌ಐ) ಈವರ್ಷ ಅರ್ಜುನ ಪ್ರಶಸ್ತಿಗೆ ಸವೀಟಿ ಬೂರಾ(81ಕೆಜಿ), ಸೋನಿಯಾ ಲಾಥರ್(57ಕೆಜಿ) ಹಾಗೂ ಸರ್ಜುಬಾಲಾ ದೇವಿ(51ಕೆಜಿ) ಅವರ ಹೆಸರನ್ನು ಶಿಫಾರಸು ಮಾಡಿದೆ.
ಈ ಮೂವರು ಬಾಕ್ಸರ್‌ಗಳು ಭಾರತದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದು, ರಾಷ್ಟ್ರೀಯ ತಂಡದ ಖಾಯಂ ಸದಸ್ಯರಾಗಿದ್ದಾರೆ. ಈ ಮೂವರು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.
2014ರ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸವೀಟಿ ಹಾಗೂ ಸರ್ಜುಬಾಲಾ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 2016ರ ಆವೃತ್ತಿಯಲ್ಲಿ ಸೋನಿಯಾ ಲಾಥರ್ ಬೆಳ್ಳಿ ಜಯಿಸಿದ್ದರು.
ಸವೀಟಿ ಹಾಗೂ ಸೋನಿಯಾ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಸವೀಟಿ 2015ರ ಆವೃತ್ತಿಯಲ್ಲಿ ಹಾಗೂ ಸೋನಿಯಾ 2012ರಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಮಾಜಿ ಏಷ್ಯನ್ ಚಾಂಪಿಯನ್ ಶಿವ ಥಾಪ ಕಳೆದ ವರ್ಷ ಅರ್ಜುನ ಪ್ರಶಸ್ತಿ ಜಯಿಸಿದ್ದರು. ಶಿವ ಈ ಪ್ರಶಸ್ತಿ ಜಯಿಸಿದ್ದ ಭಾರತದ ಏಕೈಕ ಬಾಕ್ಸರ್ ಆಗಿದ್ದಾರೆ.
Next Story





